ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ 37ನೇ ಮಾಲಿಕೆ – ಕೃಷಿ ಮತ್ತು ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ ಗಿಳಿಯಾರು ಭೋಜ ಪೂಜಾರಿ ಅವರಿಗೆ ಸನ್ಮಾನ

0
669

Click Here

Click Here

ರೈತ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ – ಟಿ ಮಂಜುನಾಥ್ ಗಿಳಿಯಾರು

ಕುಂದಾಪುರ ಮಿರರ್ ಸುದ್ದಿ…

ಕೋಟ: ರೈತ ಕಾಯಕವೇ ಶ್ರೇಷ್ಠವಾದ ಕಾರ್ಯ ಇದಕ್ಕೆ ನೈಜ ಪ್ರೋತ್ಸಾಹ ಅಗತ್ಯ ಎಂದು ನ್ಯಾಯವಾದಿ ಟಿ.ಮಂಜುನಾಥ್ ಗಿಳಿಯಾರು ಹೇಳಿದರು.

ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ರೈತ ಧ್ವನಿಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಜೆಸಿಐ ಸಿನಿಯರ್ ಕೋಟ ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 37ನೇ ಮಾಲಿಕೆಯಲ್ಲಿ ಗಿಳಿಯಾರು ಭೋಜ ಪೂಜಾರಿಯವರನ್ನು ಸನ್ಮಾನಿಸಿ ಮಾತನಾಡಿ ಯಾವುದೇ ಸರಕಾರಗಳು ಬರಲಿ ಆದರೆ ಕೃಷಿ ಕಾರ್ಯಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು ಕಷ್ಟ ಪಟ್ಟು ಬೆಳೆ ಬೆಳೆಯಲು ಶ್ರಮಿಸುವ ರೈತರ ಬೆಳೆಗಳು ನೆರೆಹಾವಳಿಗೆ ಹಾನಿಗೊಳ್ಳುತ್ತದೆ ಇದಕ್ಕೆ ಪರಿಹಾರ ಕ್ರಮ ಹಾಗೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ನೆರವು ನೀಡುವಕಾರ್ಯ ಮಾಡಲಿ ಅದೇ ರೀತಿ ಪಂಚವರ್ಣ ಸಂಸ್ಥೆ ರೈತರನ್ನು ಗುರುತಿಸುವ ಕಾಯಕ ಶ್ರೇಷ್ಠವಾದದ್ದು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪಾಂಡೇಶ್ವರ ರಕ್ತೇಶ್ಚರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮವೇ ಅರ್ಥಪೂರ್ಣ ಸಾಮಾಜಿಕವಾಗಿ ಕೃಷಿಕರಾಗಿ ಕಂಬಳ ಕ್ಷೇತ್ರದಲ್ಲಿ ಗುರುತಿಸಿಕೊಂಡ ಭೋಜ ಪೂಜಾರಿಗೆ ಅರ್ಹ ಗೌರವ ಪಂಚವರ್ಣದಿಂದ ದಕ್ಕಿದೆ ಇದು ಶ್ಲಾಘನೀಯ ಎಂದರು.

Click Here

ಇದೇ ವೇಳೆ ಯುವ ಕೃಷಿಕ, ಕಂಬಳ ಸಾಧಕ ಭೋಜ ಪೂಜಾರಿ ಇವರುಗೆ ತಂದೆ ಗಾಡಿ ಕೂಸ ಪೂಜಾರಿ, ತಾಯಿ ಗಿರೀಜಾ, ಪತ್ನಿ ಸವಿತಾ ಸಮ್ಮುಖದಲ್ಲಿ ಸಾಧಕ ರೈತ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮಕ್ಕೂ ಪ್ರಾರಂಭದಲ್ಲಿ ಬಿಲ್ವ ಪತ್ರೆ ಗಿಡ ನಡಯವುದರ ಗಾಡಿ ಕೂಸಣ್ಣ ದಂಪತಿಗಳು ಚಾಲನೆ ನೀಡಿದರು.

ಭೋಜ ಪೂಜಾರಿ ದಂಪತಿಗಳು ಗೋ ಪೂಜೆ ನೆರವೆರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಮಾಜಿ.ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯರಾದ ರಾಜು ಪೂಜಾರಿ ಕಾರ್ಕಡ, ಪುನಿತ್ ಪೂಜಾರಿ ಪಾರಂಪಳ್ಳಿ, ಶ್ಯಾಮಸುಂದರ್ ನಾಯರಿ, ಸಂಜೀವ ದೇವಾಡಿಗ, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಬೀಜಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಕಾಶ್ ಪೂಜಾರಿ, ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೋಟ ದಿನೇಶ್ ಗಾಣಿಗ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಹಿರಿಯ ಕೃಷಿಕ ಭಾಸ್ಕರ್ ಶೆಟ್ಟಿ ಮಣೂರು, ರೈತ ಧ್ವನಿ ಸಂಘ ಕೋಟ ಅಧ್ಯಕ್ಷ ಎಂ ಜಯರಾಮ ಶೆಟ್ಟಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಜೆಸಿಐ ಸಿನಿಯರ್ ಕೋಟ ಅಧ್ಯಕ್ಷ ಕೇಶವ ಆಚಾರ್ ಕೋಟ, ಜಿಲ್ಲಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಸಂಯೋಜಕ ರವೀಂದ್ರ ಮೊಗವೀರ ಮತ್ತಿತರರು ಉಪಸ್ಥಿತರಿದ್ದರು.

ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿ ಕಾರ್ಯಕ್ರಮ ಸಂಯೋಜಿಸಿದರು.

ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ, ಶಿಕ್ಷಕ ಸಂತೋಷ್ ಕುಮಾರ್ ಕೋಟ ನಿರೂಪಿಸಿದರು. ಪಂಚವರ್ಣ ಮಹಿಳಾ ಮಂಡಲದ ಕಾಯಾಧ್ಯಕ್ಷೆ ಕಲಾವತಿ ಅಶೋಕ್ ವಂದಿಸಿದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ನಾಲ್ಕು ಪ್ರಸಿದ್ಧ ಕಂಬಳದ ಕೋಣೆಗಳು ಗಾಡಿ ಕೂಸಣ್ಣನ ಎತ್ತಿನಗಾಡಿ ಗಮನ ಸೆಳೆದಳವು.

Click Here

LEAVE A REPLY

Please enter your comment!
Please enter your name here