ಕುಂದಾಪುರ ತಾಲೂಕು ಆಟೋರಿಕ್ಷಾ ವಾಹನ ಚಾಲಕರ 48 ನೇ ಮಹಾಸಭೆ.
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಆಟೋರಿಕ್ಷಾ ಚಾಲಕರು ತಮ್ಮ ಕುಟುಂಬಗಳ ನಿರ್ವಹಣೆ ಗಾಗಿ 12-14 ಘಂಟೆಗಳ ಕಾಲ ದುಡಿಯುತ್ತಿದ್ದಾರೆ ಇದರಿಂದಾಗಿ ಅವರಿಗೆ ಹ್ರದಯಾಘಾತ, ಅನಾರೋಗ್ಯಗಳು ಕಾಡುತ್ತಿದೆ. ಹಿಂದಿನ ಒಂದು ವರ್ಷದಲ್ಲಿ ಸುಮಾರು 11 ಸಾವಿರ ಮಂದಿ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ.
ಕರ್ನಾಟಕ ರಾಜ್ಯ ಸರಕಾರವು ಸಾರಿಗೆ ನೌಕರರಾಗಿರುವ ಆಟೋರಿಕ್ಷಾ ಚಾಲಕರು, ಬಸ್ಸು ಚಾಲಕರು, ನಿರ್ವಾಹಕರು, ಕ್ಲೀನರ್, ವಾಹನಗಳನ್ನು ದುರಸ್ತಿ ಮಾಡುವ ಮೆಕಾನಿಕ್, ಆಟೋಮೊಬೈಲ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮೋಟಾರು ವಾಹನ ನೌಕರರ ಕಲ್ಯಾಣ ಮಂಡಳಿಗೆ ರಾಜ್ಯ ಪಾಲರು ಅಂಕಿತ ಹಾಕಿರುವುದು ಸಿಐಟಿಯು ಹೋರಾಟಕ್ಕೆ ಸಂದ ಜಯವಾಗಿದೆ. ಸರ್ಕಾರ ಕೂಡಲೇ ಸೌಲಭ್ಯಗಳನ್ನು ಜಾರಿ ಮಾಡಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಅವರು ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ನಡೆದ 48 ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ರಚನೆ ಆಗಿರುವ ಕಲ್ಯಾಣ ಮಂಡಳಿಯನ್ನು ರಕ್ಷಿಸಿಕೊಳ್ಳಲು ಬಜೆಟ್ ನಲ್ಲಿಯೂ ಅನುದಾನ ನೀಡಲು ಒತ್ತಾಯಿಸಲು ಸಾರಿಗೆ ಸಂಘಟನೆಗಳನ್ನು ಜಿಲ್ಲೆಯಲ್ಲಿ ಬಲಿಷ್ಠ ಗೊಳಿಸಬೇಕು ಸಾರಿಗೆ ನೌಕರರ ಇಂತಹ ಹೋರಾಟಗಳಿಗೆ ಸಿಐಟಿಯು ಸಂಪೂರ್ಣ ಬೆಂಬಲಿಸಿ ಪಾಲ್ಗೊಳ್ಳುತ್ತದೆ ಎಂದರು.
ಮಹಾಸಭೆಯಲ್ಲಿ ಸಿಐಟಿಯು ಮುಖಂಡರಾದ ಎಚ್ ನರಸಿಂಹ, ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ
ಸಂಘದ ಗೌರವಾಧ್ಯಕ್ಷ ಎಚ್ ಕರುಣಾಕರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬ್ರಹ್ಮಾವರ ಆಟೋರಿಕ್ಷಾ ಸಂಘದ ಮುಖಂಡರಾದ ಸದಾಶಿವ ಪೂಜಾರಿ ಇದ್ದರು.
ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಮೇಶ್ ವಿ ವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ವಾರ್ಷಿಕ ವರದಿ ಮಂಡಿಸಿದರು.
ಸಂಘದ ಕೋಶಾಧಿಕಾರಿ ಸಂತೋಷ ಕಲ್ಲಾಗರ ಮಂಡಿಸಿದರು.
ಮಹಾಸಭೆಯು ವರದಿ ಮತ್ತು ಲೆಕ್ಕ ಪತ್ರದ ಮೇಲೆ ಚರ್ಚಿಸಿ ಅಂಗೀಕರಿಸಲಾಯಿತು.
ಮಹಾಸಭೆ ನಿರ್ಣಯ
1.ಆಟೋ ,ಟ್ಯಾಕ್ಸಿ ಗೂಡ್ಸ್ ವಾಹನಗಳಿಗೆ ಅಧಿಕ್ರತ ನಿಲ್ದಾಣಗಳನ್ನು ಗುರುತಿಸಬೇಕು.
2.ಬೈಂದೂರು ಕುಂದಾಪುರಕ್ಕೆ ತಲಾ ಎರಡು ಸಿಎನ್ ಜಿ ಬಂಕ್ ಗಳನ್ನು ತೆರೆಯಬೇಕು.
3.ಕೇಂದ್ರ ಸರಕಾರವು ಜಾರಿಗೆ ತಂದಿರುವ ಮೋಟಾರು ವಾಹನ ಕಾಯ್ದೆ -2019 ವಾಪಾಸ್ಸು ಪಡೆಯಬೇಕು.
4.ನೂತನ ಕಾರ್ಮಿಕ ಕಾಯ್ದೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಾಪಾಸ್ಸು ಪಡೆಯಬೇಕು.
ನೂತನ ಸಮಿತಿ ಆಯ್ಕೆ
ಸಂಘದ ನೂತನ ಅಧ್ಯಕ್ಷರಾಗಿ ರಮೇಶ್ ವಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ದೇವಾಡಿಗ, ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಶೇಖರ ವಿ ಸೇರಿದಂತೆ 22 ಮಂದಿ ಪದಾಧಿಕಾರಿಗಳನ್ನೊಳಗೊಂಡ ಸಮಿತಿ ಆಯ್ಕೆ ಮಾಡಲಾಯಿತು.
ಸಂಘದ ಮುಖಂಡರಾದ ಮಂಜುನಾಥ್ ಶೋಗನ್ ಸ್ವಾಗತಿಸಿ
ಸಂಘದ ಮುಖಂಡರಾದ ರವಿ ವಿಎಂ ವಂದಿಸಿದರು.











