ಕೋಟ ಗಿಳಿಯಾರು: ಹೊಳೆ ಹೂಳೆತ್ತುವಂತೆ ಆಗ್ರಹಿಸಿ ಸಭೆ; ಹೋರಾಟದ ರೂಪುರೇಷೆ

0
203

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೋಟ ಗ್ರಾ.ಪಂ. ವ್ಯಾಪ್ತಿಯ ಮೂಡುಗಿಳಿಯಾರು, ಹರ್ತಟ್ಟು ಸೇರಿದಂತೆ, ಚಿತ್ರಪಾಡಿ ಬೆಟ್ಟಕ್ಕಿ ತನಕ ಸುಮಾರು 500 ಎಕ್ರೆಗೂ ಹೆಚ್ಚುಪ್ರದೇಶದಲ್ಲಿ ನೆರೆ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಹೋರಾಟ ರೂಪಿಸುವ ಸಲುವಾಗಿ ಸ್ಥಳೀಯ ಜನಸೇವಾ ಟ್ರಸ್ಟ್ ನೇತೃತ್ವದಲ್ಲಿ ಕೋಟ ಮಾಂಗಲ್ಯ ಮಂದಿರದಲ್ಲಿ ಜು.21ರಂದು ಸ್ಥಳೀಯ ರೈತರ ಸಭೆ ನಡೆಯಿತು.

ನಮ್ಮ ಭತ್ತದ ಬೆಳೆ ಪ್ರತಿ ವರ್ಷ ನೆರೆ ಹಾವಳಿಯಿಂದ ಹಾನಿಗೀಡಾಗುತ್ತದೆ. ಹೊಳೆಯ ಹೂಳೆತ್ತಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆಗೊಳಿಸಿದರೆ ಸಮಸ್ಯೆ ಬಹುತೇಕ
ಪರಿಹಾರವಾಗಲಿದೆ. ಆದರೆ ಈ ಬಗ್ಗೆ ಎಷ್ಟೇ ಮನವಿ ಸಲ್ಲಿಸಿದರೂ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ ಎಂದು ಸ್ಥಳೀಯ ಕೃಷಿಕರು ಬೇಸರ ವ್ಯಕ್ತಪಡಿಸಿದರು. ಸಮಸ್ಯೆ ಪರಿಹಾರಕ್ಕೆ ಹೋರಾಟವೊಂದೇ ಪರಿಹಾರ ಮಾರ್ಗವಾಗಿದೆ. ಆದ್ದರಿಂದ ಈ ಬಗ್ಗೆ ಜನಸೇವಾ ಟ್ರಸ್ಟ್ ನೇತೃತ್ವದಲ್ಲೇ ಹೋರಾಟದ ರೂಪುರೇಷೆ ಹಾಕಿಕೊಳ್ಳುವ ಎಂದು ರೈತರು ತಿಳಿಸಿದರು.

Click Here

ಪ್ರತಿಭಟನೆ, ರಸ್ತೆ ತಡೆ
ಆರಂಭದಲ್ಲಿ ಶಾಸಕರಿಗೆ ಮನವಿ ನೀಡಿ ಹೊಳೆಯ ಸರ್ವೆ ನಡೆಸಿ, ಅಭಿವೃದ್ಧಿಗೊಳಿಸಲು ತಿಳಿಸುವುದು ಹಾಗೂ ಇದಕ್ಕೆ ನಿರ್ದಿಷ್ಟ ಅವಧಿಯ ಕಾಲಾವಕಾಶ ನೀಡುವುದು. ನಿರ್ಧಿಷ್ಟ ಸಮಯದಲ್ಲಿ ಸಮಸ್ಯೆ ಪರಿಹಾರವಾಗದಿದ್ದರೆ ಪ್ರತಿಭಟನೆ, ರಸ್ತೆ ತಡೆ ನಡೆಸುವುದು ಎನ್ನುವ ತೀರ್ಮಾನಕ್ಕೆ ಬರಲಾಯಿತು.

ಜನಸೇವಾ ಟ್ರಸ್ಟ್‍ನ ವಸಂತ್ ಗಿಳಿಯಾರು, ದಿನೇಶ್ ಶೆಟ್ಟಿ, ಅಶೊಕ್ ಶೆಟ್ಟಿ, ಸಫಲ್‍ಶೆಟ್ಟಿ, ಅರುಣ್ ಶೆಟ್ಟಿ, ನಿಖಿಲ್ ನಾಯಕ್, ಮೊದಲಾದವರಿದ್ದರು. ರೈತರ ಪರವಾಗಿ ಭರತ್ ಕುಮಾರ್ ಶೆಟ್ಟಿ, ಶ್ಯಾಮ್‍ಸುಂದರ್ ನಾರಿ, ರಾಘವೇಂದ್ರ ಶೆಟ್ಟಿ, ಮಹೇಶ್
ಶೆಟ್ಟಿ, ಟಿ.ಮಂಜುನಾಥ, ಸುಭಾಶ್ ಶೆಟ್ಟಿ, ಮಹಾಬಲ ಹೇರ್ಳೆ, ಕೆದೂರು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ರಾಘವೇಂದ್ರ ಪೂಜಾರಿ ಹೊಳೆಕಟ್ಟು, ಯೋಗಾನಂದ ಹೆಗ್ಡೆ, ವಿಜಯ ಗಿಳಿಯಾರು, ಸೂರ್ಯ ಶೆಟ್ಟಿ, ಅಜಿತ್ ದೇವಾಡಿಗ, ಕೋಟ ಗ್ರಾ.ಪಂ. ಅಧ್ಯಕ್ಷಸತೀಶ್ ಬಾರಿಕೆರೆ ಇದ್ದರು.

Click Here

LEAVE A REPLY

Please enter your comment!
Please enter your name here