ಕೋಟ :ಜೀವನ್ ಮಿತ್ರ ಸಮಾಜಮುಖಿ ಕಾರ್ಯದ ಪ್ರತಿರೂಪ – ಸತೀಶ್ ಹೆಚ್ ಕುಂದರ್

0
184

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಜೀವರಕ್ಷಕ ಕಾರ್ಯದ ಮೂಲಕ ಸಾಮಾಜಿಕ ಬದ್ದತೆಯನ್ನು ಜೀವನ್ ಮಿತ್ರ ಸಾಕ್ಷಿಕರಿಸಿದೆ ಎಂದು ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಹೇಳಿದರು.

ಕೋಟದ ಅಮೃತೇಶ್ವರಿ ದೇಗುಲದಲ್ಲಿ ಜೀವನ್ ಮಿತ್ರ ಸೇವಾ ಟ್ರಸ್ಟ್ ಕೋಟ, ಜೀವನ್ ಮಿತ್ರ ಆಂಬ್ಯುಲೇನ್ಸ್ ಇದರ ದಶಮಾನೋತ್ಸವ ಸಂಭ್ರಮಾಚರಣೆಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ ಸೇವೆಯೇ ಮೂಲ ಮಂತ್ರವಾಗಿರಿಸಿ ಸಮಾಜದ ಋಣ ತಿರಿಸುವ ಕಾರ್ಯ ಶ್ರೇಷ್ಠವಾದದ್ದು ಈ ನಿಟ್ಟಿನಲ್ಲಿ ದಶ ಸಂವತ್ಸರಗಳನ್ನು ಈ ಸಮಾಜಕ್ಕೆ ನೆರವಿನ ಮೂಲಕ ಊಣಬಡಿಸಿದ ಜೀವನ್ ಮಿತ್ರ ಟ್ರಸ್ಟ್ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದು ಕಾರ್ಯದ ಯಶಸ್ಸಿಗೆ ಶುಭಕೋರಿದರು.

Click Here

ಕಾರ್ಯಕ್ರಮದಲ್ಲಿ ಜೀವನ್ ಮಿತ್ರ ಸೇವಾ ಟ್ರಸ್ಟ್ ನ ನಾಗರಾಜ್ ಪುತ್ರನ್, ನಾಗೇಂದ್ರ ಪುತ್ರನ್, ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಟ ಗ್ರಾ.ಪಂ ಸದಸ್ಯ ಎಂ.ಜಯರಾಮ ಶೆಟ್ಟಿ,ಭುಜಂಗ ಗುರಿಕಾರ, ಪ್ರದೀಪ್ ಸಾಲಿಯಾನ್, ಕೋಟತಟ್ಟು ಗ್ರಾ.ಪಂ ಸದಸ್ಯ ರವೀಂದ್ರ ತಿಂಗಳಾಯ, ನ್ಯಾಯವಾದಿ ಶ್ಯಾಮಸುಂದರ ನಾಯರಿ, ಸಾಮಾಜಿಕ ಕಾರ್ಯಕರ್ತರಾದ ನಾಗರಾಜ್ ಗಾಣಿಗ ಸಾಲಿಗ್ರಾಮ, ಕೋಟ ಶ್ರೀಕಾಂತ್ ಶೆಣೈ, ಭೋಜ ಪೂಜಾರಿ ಗಿಳಿಯಾರು, ವಸಂತ ಕಾಂಚನ್ ಗುಂಡ್ಮಿ, ಜೀವನ್ ಮಿತ್ರ ಬಳಗದ ವಸಂತ ಸುವರ್ಣ, ಸಂತೋಷ್ ತೆಕ್ಕಟ್ಟೆ, ಶಶಿಧರ ಕುಂದರ್,ಆನಂದ್ ಟೈಲರ್, ಹರ್ತಟ್ಟು ಯುವಕ ಮಂಡಲದ ಪ್ರಮುಖರಾದ ಕೀರ್ತಿಶ ಪೂಜಾರಿ, ಯಕ್ಷ ಸೌರಭ ಕಲಾರಂಗದ ಸ್ಥಾಪಕ ಅಧ್ಯಕ್ಷ ಹರೀಶ್ ಭಂಢಾರಿ, ಧನುಷ್ ವಡ್ಡರ್ಸೆ, ಸ್ವದೇಶ್ ಕಾಸನಗುಂದ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕೋಟ ಪಂಚಾಯತ್ ಸದಸ್ಯ ಚಂದ್ರ ಆಚಾರ್ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here