ಕುಂದಾಪುರ ಮಿರರ್ ಸುದ್ದಿ…
ಕೋಟ: ಮಹಿಳಾ ವೇದಿಕೆ -ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆ ಇವರ ಆಶ್ರಯದಲ್ಲಿ ಆಷಾಢ ವಿಶೇಷ ಶೀರ್ಷಿಕೆಯಲ್ಲಿ ಹಾಸ್ಯದೊಂದಿಗೆ ಜೀವನ ಮೌಲ್ಯ ಎನ್ನುವ ಕಾರ್ಯಕ್ರಮ ಶ್ರೀ ಗುರು ನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು.
ಉಡುಪಿಯ ಖ್ಯಾತ ಹಾಸ್ಯ ಭಾಷಣಗಾರರಾದ ಸಂಧ್ಯಾ ಶೆಣೈ ಮಾತನಾಡಿ ವ್ಯಕ್ತಿಯ ನಿತ್ಯ ಜೀವನದ ನಡೆ ನುಡಿ, ಹಾಗೆ ವ್ಯಕ್ತಿತ್ವದ ಸುಸಂಸ್ಕೃತ ಪರಿಕಲ್ಪನೆ ಮತ್ತು ಇಂದಿನ ಆಡಂಬರ ಸೋಗಿನ ಜೀವನ ಶೈಲಿಗಳ ಸೂಕ್ಷ್ಮತೆಯನ್ನು ತಿಳಿಯಾದ ಹಾಸ್ಯ ನಗುವಿನ ಮಾತುಗಳಿಂದ ಜೀವನ ಮೌಲ್ಯಗಳನ್ನ ಎತ್ತಿ ಹಿಡಿದು ಎಳೆ ಎಳೆಯಾಗಿ ಅದ್ಭುತವಾಗಿ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅನಿಸಿಕೆ ಹಂಚಿಕೊಂಡರು.
ಸಭಾ ಕಾರ್ಯಕ್ರಮದಲ್ಲಿ ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋದಾ. ಸಿ. ಹೊಳ್ಳ ಅಧ್ಯಕ್ಷತೆ ವಹಿಸಿ ಸಂಧ್ಯಾ ಶೆಣೈ ಅವರ ವ್ಯಕ್ತಿ ಪರಿಚಯಿಸಿ ಧನ್ಯವಾದ ಇತ್ತರು.
ಗೆಳೆಯರ ಬಳಗದ ತಾರನಾಥ ಹೊಳ್ಳ, ಕೂಟ ಮಹಾಜಗತ್ತಿನ ಪ್ರಮುಖರಾದ ಪಿ.ಸಿ .ಹೊಳ್ಳ, ನರಸಿಂಹ ಅಧಿಕಾರಿ,ಶ್ರೀನಿವಾಸ ಉಪಾಧ್ಯ ,ಸುಧಾಕರ ನಾವಡ ,ಮುಂತಾದ ಗಣ್ಯರು ಹಾಗೂ ರೋಟರಿ ಮತ್ತು ಇನ್ನರ್ವಿಲ್ ಸದಸ್ಯರು ,ಮಹಿಳಾ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
ವೇದಿಕೆಯ ಉಪಾಧ್ಯಕ್ಷೆ ರೇವತಿ ಐತಾಳ್ ಸ್ವಾಗತಿಸಿದರು. ಉಪಾಧ್ಯಕ್ಷೇ ವಿಜಯಲಕ್ಷ್ಮೀ ತುಂಗ ಮತ್ತು ಲತಾ ಹೊಳ್ಳ ಪ್ರಾರ್ಥನೆ ನಡೆಸಿದರು.
ಪೂರ್ಣಿಮಾ ಅಧಿಕಾರಿ ಕಾರ್ಯಕ್ರಮ ನಿರೂಪಿಸಿದರು.











