ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ರಾಜ್ಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬೆಂಗಳೂರು, ಇಂಡಿಯಾ ಪೌಂಡೇಷನ್ ಫಾರ್ ಆರ್ಟ್ಸ್ ಬೆಂಗಳೂರು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇವರ ಸಹಯೋಗದಲ್ಲಿ ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಕಲಿ ಕಲಿಸು ಕಲಾ ಅಂತರ್ಗತ ಕಲಿಕೆಯ” ಕರಾವಳಿಯ ವೀರ ವನಿತೆಯರು ಸಾಮಾಜಿಕ ಶೋಷಣೆ ಮತ್ತು ವಿದೇಶಿಯರ ವಿರುದ್ಧ ಹೋರಾಡಿ ನಾಡು ಕಟ್ಟಿದ ಕಥನಕ್ಕೆ ಯಕ್ಷರಂಗ ರೂಪ ನೀಡಿ ಶಾಲಾ ವಿದ್ಯಾರ್ಥಿನಿಯರಿಂದ ಅಭಿನಯಿಸುವುದು” ಎಂಬ ಯೋಜನೆಯ ಕಥನ ಮಾಲಿಕೆಯ 2ನೇ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸುಧಾರಕಿ ಕಮಲಾದೇವಿ ಚಟ್ಟೋಪಾಧ್ಯಾಯರ ಕುರಿತ ಕಥನವನ್ನು ಸಂಪನ್ಮೂಲ ವ್ಯಕ್ತಿಯಾದ ಸಂತೋಷ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳ್ಕೂರು ಇವರು ಮಕ್ಕಳಿಗೆ ಕಮಲಾದೇವಿಯರ ಜೀವನ, ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದು, ಸ್ವಾತಂತ್ರ್ಯದ ನಂತರ ನಿರಾಶ್ರಿತರ ಸಮಸ್ಯೆಗೆ ಸ್ಪಂದಿಸಿದ್ದು, ಸೇವಾದಳದಲ್ಲಿ ಅವರ ಕಾರ್ಯ, ರಾಜಕೀಯ ಜೀವನ, ನೃತ್ಯ, ನಾಟಕ ಮತ್ತು ಕರಕುಶಲ ವೃತ್ತಿಗೆ ಅವರ ಕೊಡುಗೆಗಳನ್ನು ಮಕ್ಕಳಿಗೆ ತಿಳಿಸುತ್ತಾ, “ಕಮಲಾದೇವಿ ಚಟ್ಟೋಪಾಧ್ಯಾಯರು ಹಲವು ಹೋರಾಟಗಳ ಪ್ರಥಮ ಮಹಿಳೆ” ಎಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕಮಲಾದೇವಿ ಚಟ್ಟೋಪಾಧ್ಯಾಯರ ಕುರಿತು ಸಾಕ್ಷ್ಯ ಚಿತ್ರವನ್ನು ತೋರಿಸಲಾಯಿತು. ಕೊನೆಯಲ್ಲಿ ಮಕ್ಕಳಗೆ ಕಮಲಾದೇವಿಯವರ ಕುರಿತು ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಯಕ್ಷಗುರು ಯಕ್ಷಸಿರಿ ಶಂಕರನಾರಾಯಣದ ಸಂಚಾಲಕರಾದ ಕಿಶೋರ ಕುಮಾರ ಉಪಸ್ಥಿತರಿದದ್ದರು. ಕಲಿ ಕಲಿಸು ಕಲಾ ಅಂತರ್ಗತ ಕಲಿಕೆಯ ಯೋಜನೆಯ ನಿರ್ವಾಹಕರಾದ ಶಾಲಾ ಸಹ ಶಿಕ್ಷಕ ಆನಂದ ಕುಲಾಲ ಪ್ರಸ್ತಾವನೆಗೈದರು. ಸಹ ಶಿಕ್ಷಕಿ ಸಂಧ್ಯಾ ಕೆ ಸ್ವಾಗತಿಸಿದರು. ಅತಿಥಿ ಶಿಕ್ಷಕಿ ಪ್ರಮೀಳಾ ವಂದಿಸಿದರು. ಗೌರವ ಶಿಕ್ಷಕಿ ವಿಶಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.











