ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರು ಈ ಸಂಸ್ಥೆಯು ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ನೇತೃತ್ವದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ಭಾರತೀಯ ಸಂಸ್ಕೃತಿಯ ಪರಿಚಯ ಹಾಗೂ ಅನೇಕ ಸಹಪಠ್ಯ ಚಟುವಟಿಕೆಗಳ ತರಬೇತಿ ನೀಡುತ್ತಾ ಬಂದಿದೆ.
ಜುಲೈ 27ರಂದು ಸಂಸ್ಥೆಯಲ್ಲಿ ಮಳೆಗಾಲದ ಆಹಾರ ಪದ್ಧತಿ , ಮಳೆಗಾಲದ ವಿಶೇಷ ಸಾಂಪ್ರದಾಯಿಕ ತಿನಿಸುಗಳನ್ನು ಪರಿಚಯಿಸುವ ಉದ್ದೇಶದಿಂದ ಮಾನ್ಸೂನ್ ಫುಡ್ ಫೆಸ್ಟ್ ಆಚರಣೆಯನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಪೋಷಕರು ಮಳೆಗಾಲದ ಭಾರೀ ಗಾಳಿ, ಮಳೆ, ವಿದ್ಯುತ್ ಅಭಾವದ ನಡುವೆ, ಬಿಡುವು ಮಾಡಿಕೊಂಡು ಬಹಳಷ್ಟು ಬಗೆ ಬಗೆಯ ಸುಮಾರು 70 ಕ್ಕೂ ಹೆಚ್ಚು ವಿಧದ ತಿನಿಸುಗಳನ್ನು ಮಾಡಿ ಕಳುಹಿಸುವ ಮೂಲಕ ಸಂಸ್ಥೆಯ ಬಗೆಗಿನ ತಮ್ಮ ಸಂಪೂರ್ಣ ಒಲವು, ವಿಶ್ವಾಸ ವ್ಯಕ್ತಪಡಿಸಿದರು. ಶಾಲಾ ಆಡಳಿತಾದಿಕಾರಿ ಚೈತ್ರ ಯಡಿಯಾಳ ಇವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಮಳೆಗಾಲದ ಅಪರೂಪದ ಆಹಾರ ಪದ್ಧತಿ, ಪ್ರಕೃತಿಯ ಕೊಡುಗೆ, ಇವುಗಳಿಂದ ಸಿಗುವ ಆರೋಗ್ಯ ಲಾಭಗಳನ್ನು ತಿಳಿಸುತ್ತಾ ಪ್ರತಿಯೊಂದು ಅನ್ನದ ಅಗಳು ಪವಿತ್ರವಾದುದು , ಬೇಕಾಗುವಷ್ಟೆ ಬಡಿಸಿಕೊಳ್ಳಬೇಕು , ಬಡಿಸಿಕೊಂಡದ್ದೆಲ್ಲವನ್ನೂ ಉಣ್ಣಬೇಕು ಎಂದು ಮಕ್ಕಳಿಗೆ ತಿಳಿಹೇಳಿದರು. ಆಹಾರ ಪದಾರ್ಥಗಳನ್ನು ತಯಾರಿಸಿದ ತಾಯಿ/ ಪೋಷಕರ ಮಹತ್ವ, ಅವರಿಗೆ ಗೌರವ, ಪ್ರೀತಿ ತೋರುವಂತೆ, ಎಂದೂ ಕೂಡ ಊಟದ ಕುರಿತು ಅವಹೇಳನ ಮಾಡಬಾರದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ವಿದ್ಯಾರ್ಥಿಗಳು ತಂದ ತಿನಿಸುಗಳನ್ನು ಮಕ್ಕಳಿಗೆ ಹಂಚುವ ಮೂಲಕ ಈ ದಿನದ ಆಚರಣೆ ಸಂಪನ್ನಗೊಂಡಿತು. ಟ್ರಸ್ಟ್ ನ ಅಧ್ಯಕ್ಷರಾದ ಬಲಾಡಿ ಸಂತೋಷ ಕುಮಾರ ಶೆಟ್ಟಿ ಹಾಗೂ ನಿರ್ದೇಶಕರಾದ ಅರುಣ್ ಕುಮಾರ್ ಶೆಟ್ಟಿ, ಅಶೋಕ್ ಮತ್ತು ಸುಭಾಶ್ಚಂದ್ರ ಶೆಟ್ಟಿ ಕೊಡ್ಲಾಡಿ ಉಪಸ್ಥಿತರಿದ್ದರು.











