ಕುಂದಾಪುರ :ಸಿಎ ಫೌಂಡೇಶನ್ ಫಲಿತಾಂಶ : ಎಕ್ಸಲೆಂಟ್ ಕಾಲೇಜು ಉಡುಪಿ ಜಿಲ್ಲೆಯಲ್ಲೆ ಪ್ರಥಮ ಸ್ಥಾನ

0
145

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸಿಎ, ಸಿಎಸ್‌ಇಇಟಿ ವೃತ್ತಿ ಪರ ಕೋರ್ಸ್ಗಳಿಗೆ ಹನ್ನೆರಡು ವರ್ಷಗಳ ತರಬೇತಿ ನೀಡುತ್ತಿರುವ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು institute of charted accountancs of India & institute of company secretaries of India ಸಂಸ್ಥೆಗಳು ನಡೆಸಿದ ಸಿಎ ಮತ್ತು ಸಿಎಸ್‌ಇಇಟಿ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಸಿಂಚನಾ ಎಸ್ ಶೆಟ್ಟಿ (೨೭೦) ಅಭಿಷೇಕ ಅಡಿಗ (೨೬೯) ಸಿಂಚನ ಎಸ್ ಬಸ್ರೂರ್ (೨೫೫) ಪ್ರಣವ್ (೨೪೯) ಹರ್ಷಿತಾ ಡಿ.ಎಸ್ (೨೦೮) ಮಾನ್ಯ (೨೦೦) ಹಾಗೆ ಸಿಎಸ್ ಫೌಂಡೇಶನ್‌ನಲ್ಲಿ ಶ್ರೇಯಾ (೧೦೪) ಸಿದ್ದಾಂತ್ (೧೦೦) ಅಂಕಗಳನ್ನು ಪಡೆಯುವುದರೊಂದಿಗೆ ಉತ್ತೀರ್ಣರಾಗುವ ಮೂಲಕ ಮುಂದಿನ ಹಂತಕ್ಕೆ ಅರ್ಹತೆಯನ್ನು ಪಡೆದಿದ್ದಾರೆ.

Click Here

ಸಿಎ ಫೌಂಡೇಶನ್ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಎಂ. ಎಂ ಹೆಗ್ಡೆ ಎಜುಕೇಶನಲ್ & ಚಾರೀಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆ, ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಶ್ಲಾಘಿಸಿದ್ದಾರೆ.

Click Here

LEAVE A REPLY

Please enter your comment!
Please enter your name here