ಅಘೋರೇಶ್ವರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

0
477

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಒಂದು ದಿನಕ್ಕೆ ಸೀಮಿತಗೊಳ್ಳದೆ ವರ್ಷವಿಡೀ ಆಚರಿಸುವಂತ್ತಾಗಬೇಕು ಎಂದು ಬ್ಯಾರಿ ಅಕಾಡೆಮಿ ಮಂಗಳೂರು ಇದರ ಯೋಜನಾಧಿಕಾರಿ ಪೂರ್ಣಿಮಾ ಹೇಳಿದ್ದಾರೆ.

ಅಘೋರೇಶ್ವರ ಕಲಾರಂಗ ಕಾರ್ತಟ್ಟು ಚಿತ್ರಪಾಡಿ ಇದರ ವತಿಯಿಂದ ಪ್ರತಿವರ್ಷ ನಡೆಸಲ್ಪಡುವ 5ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಘೋರೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸರಕಾರ ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮದ ಮೂಲಕ ವರ್ಷವಿಡೀ ಕಾರ್ಯಕ್ರಮ ಆಯೋಜಿಸಿದೆ. ಇದರಿಂದ ಮಾತೃಭಾಷೆ ಪ್ರೇಮ ಹೆಚ್ಚಿಸಲು ಸಹಕಾರಿ, ಮನೆಯಲ್ಲಿ ಆಂಗ್ಲಭಾಷೆ ನಿಲ್ಲಿಸಿ ಕನ್ನಡ ಮಾತಾನಾಡುವದನ್ನು ಮೊದಲು ಪ್ರಾರಂಭಿಸಿ ಆಂಗ್ಲ ಭಾಷೆ ಬಗ್ಗೆ ವಾಮೂಹ ಕಡಿತಗೊಳಿಸಿ ಎಂದರಲ್ಲದೆ ಇತ್ತೀಚಿನ ದಿನಗಳಲ್ಲಿ ವ್ಯಾಪಿಸಿಕೊಳ್ಳುತ್ತಿರುವ ಪಾಶ್ಚಿಮಾತ್ಯ ಸಂಸ್ಕೃತಿ ಬಿಟ್ಟು ಸನಾತನ ಭಾರತೀಯ ಸಂಸ್ಕ್ರತಿಯ ಮೈಗೂಡಿಸಿಕೊಂಡು ಗುರುಹಿರಿಯರಿಗೆ ಗೌರವ ನೀಡುವ ಜೊತೆಗೆ ಸಂಸ್ಕಾರಯುತವಾಗಿ ನಡೆದುಕೊಳ್ಳಬೇಕು, ಸಂಘಸಂಸ್ಥೆಗಳ ಪ್ರಮುಖ ಹೆಜ್ಜೆ ಏನೆಂದರೆ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳುವುದರ ಜೊತೆಗೆ ಸಮಾಜಮುಖಿ ಚಿಂತನೆ ಕಾರ್ಯದಲ್ಲಿ ತೋಡಗಿಕೊಳ್ಳುವುದು ಈ ನಿಟ್ಟಿನಲ್ಲಿ ಅಘೋರೇಶ್ವರ ಕಲಾರಂಗ ಒಂದು ಹೆಜ್ಜೆ ಮುಂದೆ ಇರಿಸಿ ಕಾರ್ಯನ್ಮುಖವಾಗಿದೆ ಎಂದು ಪ್ರಶಂಸಿದರು.

ಅಧ್ಯಕ್ಷತೆಯನ್ನು ಕಲಾರಂಗದ ಅಧ್ಯಕ್ಷ ಲಕ್ಷ್ಮಣ್ ನಾಯರಿ ವಹಿಸಿದ್ದರು.

Click Here

ಈ ಸಂದರ್ಭದಲ್ಲಿ ಖ್ಯಾತ ಮುಳುಗುತಜ್ಞ, ಸಮಾಜಸೇವಕ ಈಶ್ವರ್ ಮಲ್ಪೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸ್ಥಳೀಯ ಸಾಧಕ ಸಂಘಸಂಸ್ಥೆಗಳಾದ ಪಾಂಚಜನ್ಯ ಸಂಘ ಹಂದಟ್ಟು ಪಾರಂಪಳ್ಳಿ,ಹೆಚ್ ಕೆ ಫ್ರೆಂಡ್ಸ್ ಹೊಳ್ಕೆರೆ,ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ,ಗಾಣಿಗ ಯುವ ಸಂಘ ಕೋಟ ಇವರುಗಳಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು ಹಾಗೂ ಮೆಸ್ಕಾಂ ಸೇವೆಯಲ್ಲಿ ರಮೇಶ್ ಮೇಳದ,ಅಂಗನವಾಡಿ ಕಾರ್ಯಕರ್ತೆ ಮಮತಾ ಎನ್ ನಾಯರಿ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಮಖ್ಯ ಅತಿಥಿಗಳಾಗಿ ಅಘೋರೇಶ್ವರ ದೇವಸ್ಥಾನ ಕಾರ್ತಟ್ಟು ಇದರ ಮುಕ್ತೇಸರ ಚಂದ್ರಶೇಖರ ಕಾರಂತ್,ತಾಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ಅಚ್ಯುತ್ ಪೂಜಾರಿ ಕಾರ್ಕಡ,ಸಾಲಿಗ್ರಾಮ ಪ.ಪಂ.ಅಧ್ಯಕ್ಷೆ ಸುಲತಾ ಹೆಗ್ಡೆ,ವಾಯುಸೇನೆಯಲ್ಲಿ ಕಾರ್ಯನಿರ್ವಹಿಸಿತ್ತಿರುವ ಶ್ರೀಕಾಂತ್ ಮಧ್ಯಸ್ಥ,ಕೃಷ್ಣಪ್ರಸಾದ್ ಪಿ.ವೈ.ಹೇರ್ಳೆ,ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ರೇಡಿಯಾಲಜಿ ಇಮೇಜಿಂಗ್ ಆಫೀಸರ್ಸ್
ಉಪಸ್ಥಿತರಿದ್ದರು. ಸಂಘದ ಸದಸ್ಯ ವಿಶ್ವನಾಥ ಗಾಣಿಗ ಪ್ರಾಸ್ತಾವನೆ ಸಲ್ಲಿಸಿದರು.ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ ನಾಯರಿ, ಸದಸ್ಯ ರವಿ ಬನ್ನಾಡಿ ಸನ್ಮಾನ ಪತ್ರ ವಾಚಿಸಿದರು.ಮಾಜಿ ಅಧ್ಯಕ್ಷ ಪ್ರಭಾಕರ ನಾಯರಿ ಸ್ವಾಗತಿಸಿದರು.ಕಾರ್ಯಕ್ರಮವನ್ನು ಕವಿತಾ ನಿರೂಪಿಸಿದರು. ಕಾರ್ಯದರ್ಶಿ ನಾಗರಾಜ್ ಐತಾಳ್ ವಂದಿಸಿದರು.ಸಂಸ್ಥೆ ರಾಧಕೃಷ್ಣ ಗಾಣಿಗ, ಕಾರ್ಯಕ್ರಮ ಸಂಯೋಜಿಸಿದರು.ನಂತರ ಭಾಗವತ ಸದಾಶಿವ ಅಮೀನ್ ನೇತ್ರತ್ವದ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

Click Here

LEAVE A REPLY

Please enter your comment!
Please enter your name here