ಯಡಾಡಿ ಮತ್ಯಾಡಿಯ ಲಿಟ್ಲ್ ಸ್ಟಾರ್ (ವಿದ್ಯಾರಣ್ಯ) ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಮಾಸಿಕ ಹಸ್ತ ಪತ್ರಿಕೆ ಮತ್ತು ಗೋಡೆ ಪತ್ರಿಕೆ ಅನಾವರಣ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ತೋಚಿದನ್ನು ಗೀಚಿದರೆ ಅದು ಕಾವ್ಯ. ಬೇಂದ್ರೆಯವರು ನಮಗೆ ಉದಾಹರಣೆ. ಬೆಂದು ಬೆಂದ ಬೇಂದ್ರೆಯೇ ಜೀವನದಲ್ಲಿ ಸಾಧಿಸಲು ನಿರಂತರ ಶ್ರಮ ಬೇಕು ಎನ್ನುವುದಕ್ಕೆ ಸಾಕ್ಷಿ ಎಂದು ಮಂಗಳೂರಿನ ಶ್ರೀ ರಾಮಕೃಷ್ಣ ಕಾಲೇಜಿನ ನಿವೃತ್ತ ಪ್ರಾಶುಂಪಾಲ ಪ್ರೋ. ಎಂ.ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಯಡಾಡಿ ಮತ್ಯಾಡಿಯ ಲಿಟ್ಲ್ ಸ್ಟಾರ್ (ವಿದ್ಯಾರಣ್ಯ) ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಮಾಸಿಕ ಹಸ್ತ ಪತ್ರಿಕೆ ಮತ್ತು ಗೋಡೆ ಪತ್ರಿಕೆ ಅನಾವರಣಗೊಳಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚು ಗಮನ ನೀಡಬೇಕು, ಮೊಬೈಲ್, ಚಾಟಿಂಗ್, ಕ್ರಿಕೆಟ್ ಮತ್ತು ಸಿನಿಮಾದಿಂದ ದೂರ ಇರಬೇಕು ಎಂದರು. ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಪ್ರಾಶುಂಪಾಲ ಡಾ. ಭಾಸ್ಕರ್ ಶೆಟ್ಟಿ ಮಾತನಾಡಿ, ಪರಿಸರದೊಂದಿನ ಶಿಕ್ಷಣ ಇಂದಿನ ಮಕ್ಕಳಿಗೆ ಸಿಗಬೇಕು. ಮಕ್ಕಳಿಗೆ ನೆಲದ ಶಿಕ್ಷಣ ಸಿಗಬೇಕು ಲಿಟ್ಲ್ ಸ್ಟಾರ್ ಆಂಗ್ಲ್ ಮಾಧ್ಯಮ ಶಾಲೆಯು ಅತ್ಯುತ್ತಮ ಶಿಕ್ಷಣ ನೀಡುತ್ತಾ ಬರುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ನಿವೇದಿತಾ ಬಾದಾಮಿ (ನರೇಂದ್ರ ಆಶಯ) ಶ್ರೇಯ ಕೆ ಬೆಂಗಳೂರು(ಅಮ್ಮ) ಸುಮತಿ ಶೆಟ್ಟಿ (ಪರಿಸರ ಕಾಳಜಿ) ತನ್ವಿ(ಅಪ್ಪ ಅಮ್ಮ) ಹಾಗೂ ಸಾನ್ವಿ (ಪರಿಸರ) ಅವರ ಕಾವ್ಯ ವಾಚನಗಳು ಪ್ರಸ್ತುತಿಗೊಂಡಿತು.
ಕುಂದಾಪುರ ಸುಜ್ಜಾನ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ಸುಜ್ಞಾನ್ ಎಜುಕೇಶನ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಲಿಟ್ಲ್ ಸ್ಟಾರ್ (ವಿದ್ಯಾರಣ್ಯ) ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರದೀಪ್ ಕೆ. ವಂದಿಸಿದರು. ಶಿಕ್ಷಕ ಸಂತೋಷ್ ಕುಮಾರ್ ನಿರೂಪಿಸಿದರು.











