ಕುಂದಾಪುರ ಮಾರ್ಕೆಟ್ ಬಾಯ್ಸ್ ವತಿಯಿಂದ 78ನೇ ಸ್ವಾತಂತ್ರ ದಿನಾಚರಣೆ

0
218

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮಾರ್ಕೆಟ್ ಬಾಯ್ಸ್ ಕುಂದಾಪುರ ಇವರ ಆಶ್ರಯದಲ್ಲಿ 78ನೇ ಸ್ವಾತಂತ್ರ ದಿನಾಚರಣೆಯನ್ನು ಮೀನು ಮಾರ್ಕೆಟ್ ರಸ್ತೆ ಕುಂದಾಪುರದಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿ ಆಗಿ ಆಗಮಿಸಿದ ಬಿ.ಆರ್. ರಾಯರ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರದ ನಿವೃತ್ತ ಮುಖ್ಯೋಪಾಧ್ಯಾಯ ನಿ ಶಶಿಕಲಾ ಬೀಜೂರ್ ರವರು ಧ್ವಜಾರೋಣ ನೆರವೇರಿಸಿದರು.

Click Here

ಈ ಸಂದರ್ಭದಲ್ಲಿ ಸ್ವಾತಂತ್ರಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರ ಯೋಧರನ್ನು ಸ್ಮರಿಸಲಾಯಿತು. ಸ್ವತಂತ್ರ ದಿನಾಚರಣೆಯ ಮಹತ್ವ ಮತ್ತು ದೇಶದ ನಾಗರಿಕರ ಜವಾಬ್ದಾರಿಯನ್ನು ತಿಳಿಸಿದರು. ಸ್ವತಂತ್ರ ದಿನಾಚರಣೆಯನ್ನು ಅಚ್ಚು ಕಟ್ಟಾಗಿ ಆಚರಣೆ ಮಾಡುತ್ತಿರುವ ಮಾರ್ಕೆಟ್ ಬಾಯ್ಸ್ ನ ಸರ್ವ ಸದಸ್ಯರನ್ನು ಅಭಿನಂದಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಚಿಲ್ಡ್ರನ್ಸ್ ಫ್ಯಾಷನ್ ಕುಂದಾಪುರ ಇದರ ಮಾಲೀಕರದ ಆನಂದ್ ರಾವ್ ಕೆರಾಡಿ, ಮಾರ್ಕೆಟ್ ಬಾಯ್ಸ್ ನ ಅಧ್ಯಕ್ಷರಾದ ನಟೇಶ್ ಉಪಸ್ಥಿತರಿದ್ದರು.

ಈ ಸಂದರ್ಭಲ್ಲಿ ಆಗಮಿಸಿದ ಎಲ್ಲ ಸಾರ್ವಜನಿಕರಿಗೆ ಸಿಹಿ ಹಂಚುದರ ಮೂಲಕ ಸಂಭ್ರಮಿಸಲಾಯಿತು. ಮಾರ್ಕೆಟ್ ಬಾಯ್ಸ್ ನ ಸದಸ್ಯರಾದ ಸುಧೀರ್ ಕೆ. ಕಾರ್ಯಕ್ರಮ ನಿರ್ವಹಿಸಿದರು. ಧ್ವಜಾರೋಹಣದ ನಂತರ ಮಾರ್ಕೆಟ್ ಬಾಯ್ಸ್ ನ ಸದಸ್ಯರು ರಾಯಲ್ಸ್ ಕ್ಲಬ್ (ರಿ) ಕುಂದಾಪುರ ಇದರ ಜಂಟಿ ಆಶ್ರಯದೊಂದಿಗೆ ಸಾರ್ವಜನಿಕ ಆಸ್ಪತ್ರೆ ಕುಂದಾಪುರದಲ್ಲಿ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು.

Click Here

LEAVE A REPLY

Please enter your comment!
Please enter your name here