ಪಡುಕೋಣೆಗೆ ವಿಶ್ವಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಭೇಟಿ

0
671

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಬ್ಯಾಡ್ಮಿಂಟನ್ ಲೋಕದ ದಿಗ್ಗಜ, ವಿಶ್ವದರ್ಜೆಯ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಶುಕ್ರವಾರ ಹುಟ್ಟೂರು ಪಡುಕೋಣೆಗೆ ಆಗಮಿಸಿದ್ದರು. ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿರುವ ಸಂದರ್ಭದಲ್ಲಿ ಪ್ರಕಾಶ್ ಪಡುಕೋಣೆ ಹುಟ್ಟೂರು ಪಡುಕೋಣೆಗೆ ಆಗಮಿಸಿರುವುದು ವಿಶೇಷವಾಗಿದೆ.
ಪಡುಕೋಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಪ್ರಕಾಶ್ ಪಡುಕೋಣೆ ಅವರಿಗೆ ಅತ್ಯಂತ ಆತ್ಮೀಯ ಸ್ವಾಗತ ನೀಡಲಾಯಿತು. ಕೆಲಹೊತ್ತು ವಿದ್ಯಾರ್ಥಿಗಳೊಂದಿಗೆ ಕಳೆದ ಪ್ರಕಾಶ್ ಪಡುಕೋಣೆ ಪ್ರೋತ್ಸಾಹದ ಮಾತುಗಳನ್ನಾಡಿದರು. ವಿಶ್ವಮಟ್ಟದ ಬ್ಯಾಡ್ಮಿಂಟನ್ ಧ್ರುವತಾರೆ ಪ್ರಕಾಶ್ ಪಡುಕೋಣೆ ತಮ್ಮ ಶಾಲೆಗೆ ಭೇಟಿ ನೀಡಿರುವುದಕ್ಕೆ ಅತೀವ ಸಂಭ್ರಮ ಪಟ್ಟ ವಿದ್ಯಾರ್ಥಿಗಳು ಪ್ರಕಾಶ್ ಅವರೊಂದಿಗೆ ಪೋಟೋ ಕ್ಲಿಕ್ಕಿಸಿಕೊಂಡರು.


ಶಾಲೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಪ್ರಕಾಶ್ ಪಡುಕೋಣೆ ದಂಪತಿಗಳನ್ನು ಅಭಿನಂದಿಸಲಾಯಿತು. ನಾಗರಾಜ ಬಿ ಪಡುಕೋಣೆ ಮತ್ತು ಪ್ರವೀಣ ಪಡುಕೋಣೆ ಪ್ರಕಾಶ್ ಪಡುಕೋಣೆಯವರನ್ನು ಬರಮಾಡಿಕೊಂಡರು. ಜನಪ್ರತಿನಿಧಿ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ ಅಭಿನಂದನಾ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸರೀಟಾ ಪಾಯಸ್, ಸಹಶಿಕ್ಷಕರಾದ ಅಮಿತಾ, ಶ್ಯಾಮಲ, ಜ್ಯೋತಿ, ಅಕ್ಷರ ದಾಸೋಹ ಸಿಬಂದಿಗಳಾದ ಕುಸುಮ, ಸುಗಂಧಿ ಹಾಗೂ ಸ್ಥಳೀಯರಾದ ಶಿವರಾಜ್ ಪಡುಕೋಣೆ, ರೋಶನ್ ಬಿಲ್ಲವ, ಅಶ್ವೆನ್ ಪಡುಕೋಣೆ, ಗೋಪಾಲ ಪಡುಕೋಣೆ, ಸಂತೋಷ್ ಹಡವು, ರೋಶನ್ ಬಿಲ್ಲವ, ಸಾಗರ, ಸುಬ್ರಹ್ಮಣ್ಯ ಆಚಾರ್ ಮತ್ತು ಸ್ಥಳೀಯರನೇಕರು ಉಪಸ್ಥಿತರಿದ್ದರು.

Click Here

ಪ್ರಕಾಶ್ ಪಡುಕೋಣೆ ಅವರೊಂದಿಗೆ ಪ್ರಕಾಶ್ ಪಡುಕೋಣೆ ಪತ್ನಿ ಉಜ್ವಲ ಪ್ರಕಾಶ್ ಪಡುಕೋಣೆ, ಪ್ರಕಾಶ್ ಪಡುಕೋಣೆ ಸ್ನೇಹಿತರಾದ ಶಿರಿಸ್ ಗುಜ್ಜಾರ್ ದಂಪತಿಗಳು ಇದ್ದರು.

ಸುಬ್ರಹ್ಮಣ್ಯ ಪಡುಕೋಣೆ ಮನೆಗೆ ಭೇಟಿ:
ಬಳಿಕ ಜನಪ್ರತಿನಿಧಿ ಪತ್ರಿಕೆಯ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆಯ ಅವರ ಮನೆಗೆ ಭೇಟಿ ನೀಡಿದರು. ಪ್ರಕಾಶ್ ಪಡುಕೋಣೆಯವರನ್ನು ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿಕೊಂಡು, ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಅಭಿನಂದಿಸಿದರು. ಸುಮನಾ ಪಡುಕೋಣೆ ಉಜ್ವಲ ಪ್ರಕಾಶ್ ಪಡುಕೋಣೆ ಅವರಿಗೆ ಅರಶಿನಕುಂಕುಮ ಮಂಗಳದ್ರವ್ಯಗಳನ್ನಿತ್ತು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.

Click Here

LEAVE A REPLY

Please enter your comment!
Please enter your name here