ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :2024-25 ನೇ ಶೈಕ್ಷಣಿಕ ವರ್ಷದ ಪ್ರೌಢಶಾಲಾ ವಿಭಾಗದ ಪ್ರಥಮ ಪಾಲಕರ – ಶಿಕ್ಷಕರ ಸಭೆ ಹಾಗೂ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನೆರೆವೇರಿತು.
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಗೂ ಲೇಖಕ ನರೇಂದ್ರ ಕುಮಾರ್ ಕೋಟ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು,”ಜಗತ್ತಿನಲ್ಲಿ ಯಾರು ದಡ್ಡರಲ್ಲ, ಕಲಿಕೆಯಲ್ಲಿ ಹಠಕ್ಕೆ ಬಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ” ಎಂದರು. ಅಲ್ಲದೇ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಪ್ರತಿ ವಿದ್ಯಾರ್ಥಿಯ ಬಗ್ಗೆ ಶಿಕ್ಷಕರು ವಿಶೇಷ ಕಾಳಜಿ ವಹಿಸಿರುವುದನ್ನು ತಾನು ಗಮನಿಸಿರುವುದಾಗಿ ತಿಳಿಸಿದರು. “ಕತ್ತಲು ಕವಿಯಿತು ಎಂದು ಮನದಲ್ಲಿ ನೊಂದು, ಹಿಡಿಶಾಪ ಹಾಕುವ ಬದಲು ಹೇಗಾದರೊಂದು ಹಣತೆ ತಂದು ದೀಪ ಹಚ್ಚು ಮೊದಲು ”ಎನ್ನುವ ಕವನದ ಸಾಲಿನೊಂದಿಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಸರೋಜಿನಿ ಆಚಾರ್ಯರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ಶಾಲಾ ವಾರ್ಷಿಕ ಕ್ರಿಯಾಯೋಜನೆಯ ಬಗ್ಗೆ ತಿಳಿಸುತ್ತಾ, ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಚೆಸ್, ಯಕ್ಷಗಾನ ಹಾಗೂ ಚಂಡೆ, ಕರಾಟೆ ಚಿತ್ರಕಲೆ,ಮುಂತಾದ ಚಟುವಟಿಕೆಗಳನ್ನು ಕಲಿಸಿಕೊಡಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ವೇದಿಕೆಯಲ್ಲಿದ್ದ ಯಕ್ಷಗುರು ಮಹೇಶ್ ಕುಮಾರ್ ಮಂದಾರ್ತಿ ಮಾತನಾಡಿ ಈ ಎಕ್ಸಲೆಂಟ್ ಸಂಸ್ಥೆಯಲ್ಲಿ ಕಲಿಕೆಯ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ತುಂಬಾನೇ ಪ್ರೋತ್ಸಾಹ ನೀಡುತ್ತಿದ್ದಾರೆ. ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಯು ಉಳಿಸಿಕೊಂಡು ಹೋಗಬೇಕು ಎಂದರು. ಚೆಸ್ ಮಾಸ್ಟರ್ ನರೇಶ್ ರಾವ್‍ರವರು “ಕ್ರೀಡಾ ಕೊಟದಲ್ಲಿ ಉದ್ಯೋಗಕ್ಕೆ ವಿಫುಲ ಅವಕಾಶಗಳಿವೆ . ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕರಾಟೆ ಗುರು ಕೀಯೋಸಿ ಕಿರಣ್ ಕುಂದಾಪುರ ಅವರು ಮಾತನಾಡಿ ಕರ ಎಂದರೆ ಕೈ, ಟೆ-ಖಾಲಿ ,ಅಂದರೆ ಖಾಲಿ ಕೈಯಲ್ಲಿ ಮಾಡುವ ಚಟುವಟಿಕೆಯೇ ಕರಾಟೆ ಕರಾಟೆಯಿಂದ ಉತ್ತಮ ವ್ಯಾಯಾಮ ಸಿಗುತ್ತದೆ ಎಂದರು. ಚಿತ್ರಕಲಾ ಶಿಕ್ಷಕರಾದ ಕುಮಾರಿ ಐಶ್ವರ್ಯರವರು ಚಿತ್ರಕಲೆಯ ಮಹತ್ವವನ್ನು ತಿಳಿಸಿದರು .
ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿಯವರು ಮಾತನಾಡಿ ಎಕ್ಸಲೆಂಟ್ ಎಂದರೆ ಕೇವಲ ಶಿಕ್ಷಣವಲ್ಲ. ಶಿಕ್ಷಣದ ಜೊತೆಗೆ ಜೀವನವನ್ನು ಕಟ್ಟಿಕೊಳ್ಳುವ ಕಲೆಯನ್ನು ಕೂಡ ಕಲಿಸಿ ಅದರ ಜೊತೆಗೆ ಸಂಸ್ಕಾರವನ್ನು ನೀಡುತ್ತಿದ್ದೇವೆ ,ಅಷ್ಟೇ ಅಲ್ಲವೇ ವಿವಿಧ ಆಚರಣೆಗಳನ್ನು ಆಚರಿಸಲಾಗುತ್ತಿದ್ದು ಈ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿಗಳನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಂ.ಎಂ.ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ.ಮಹೇಶ್ ಹೆಗ್ಡೆಯವರು ಉತ್ತಮ ಗುಣ ನಡತೆ ,ಒಳ್ಳೆಯ ಸಂಸ್ಕೃತಿ, ಹಿರಿಯರಿಗೆ ಗೌರವ ಕೊಡುವ ಪದ್ಧತಿಯನ್ನು ವಿದ್ಯೆಯ ಜೊತೆಗೆ ಕಲಿಸಿಕೊಟ್ಟಾಗ ಸಾಧನೆ ಸಾಧ್ಯ. ಅಂತಹ ಕಲಿಕೆಯನ್ನು ನಮ್ಮ ಸಂಸ್ಥೆಯ ಶಿಕ್ಷಕ ವೃಂದದವರು ನೀಡುತ್ತಿದ್ದಾರೆ ಎಂದರು. ಪ್ರೌಢಶಾಲಾ ಶಿಕ್ಷಕಿ ಶಿಲ್ಪಾರಾಣಿಯವರು ಐ.ಐ.ಟಿ ಮತ್ತು ನೀಟ್ ಪೌಂಡೇಶನ್ ತರಗತಿ ನಡೆಸುತ್ತಿರುವುದರ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೌಢಶಾಲಾ ವಿಜ್ಞಾನ ಶಿಕ್ಷಕಿ ಪ್ರಥ್ವಿ ಕಾರ್ಯಕ್ರಮ ನಿರೂಪಿಸಿದರು. ಗಣಿತ ಶಿಕ್ಷಕಿ ಜಯಪ್ರಧಾ ಸ್ವಾಗತಿಸಿ, ಹಿಂದಿ ಶಿಕ್ಷಕಿ ಉಷಾಲತಾ ವಂದಿಸಿದರು.











