ಉಡುಪಿ ಜಿಲ್ಲಾ ಶಿಕ್ಷಕರ ನಾಟಕ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

0
285

Click Here

Click Here

ಕುಂದಾಪುರ ಮಿರರ್ ಸುದ್ದಿ…

ಉಡುಪಿ: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಉಡುಪಿ ಜಿಲ್ಲೆಯ ಶಿಕ್ಷಕರ ತಂಡ ಶಶಿರಾಜ್ ಕಾವೂರು ರಚಿಸಿದ “ಬರ್ಬರೀಕ” ನಾಟಕವನ್ನು ಪ್ರದರ್ಶಿಸಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

Click Here

ಎರಡು ವರ್ಷದ ಹಿಂದೆ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿದ್ದ ಈ ನಾಟಕ ಈ ಬಾರಿ ಹೊಸ ವಿನ್ಯಾಸ ಮತ್ತು ವಿಭಿನ್ನ ಸಂಯೋಜನೆಯೊಂದಿಗೆ ಈ ಬಾರಿ ಮತ್ತೆ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡಿತು.

ಬಿ.ಎಸ್. ರಾಮ್ ಶೆಟ್ಟಿ ನಿರ್ದೇಶನದಲ್ಲಿ ಪ್ರದರ್ಶನಗೊಂಡ ನಾಟಕಕ್ಕೆ ವಿಜಯ್ ಕುಮಾರ್ ಕುಂಭಾಶಿಯವರ ಗೀತ ಸಾಹಿತ್ಯ, ದಿವಾಕರ ಕಟೀಲ್ ಇವರ ಸಂಗೀತ ಸಂಯೋಜನೆ, ರಮೇಶ್ ಕಪಿಲೇಶ್ವರ ಇವರ ರಂಗಸಜ್ಜಿಕೆ ಮತ್ತು ವೇಷಭೂಷಣವಿತ್ತು. ರವಿ ಎಸ್ ಪೂಜಾರಿ ಬೈಕಾಡಿ ಇವರ ನೇತೃತ್ವದ ಶಿಕ್ಷಕರ ತಂಡದಲ್ಲಿ ಹರೀಶ್ ಪೂಜಾರಿ ಎಸ್, ನಾಗರತ್ನ ಗುಂಡ್ಮಿ, ವನಿತಾ ಶೆಟ್ಟಿ ಚೇರ್ಕಾಡಿ, ದಿನೇಶ್ ಶೆಟ್ಟಿ ಕಾರ್ಕಳ, ಲಕ್ಷ್ಮೀನಾರಾಯಣ ಪೈ ಕನ್ನಾರು, ಸತೀಶ್ ಬೇಳಂಜೆ, ಸುರೇಂದ್ರ ಕೋಟ, ರವೀಂದ್ರ ಶೆಟ್ಟಿ ಕೊಂಡಾಡಿ, ಸದಾಶಿವ ಕೆಂಚನೂರು ಇವರುಗಳು ಭಾಗಿಯಾಗಿದ್ದರು.

Click Here

LEAVE A REPLY

Please enter your comment!
Please enter your name here