ಯುವ ಸಮೂಹ ಸ್ವಚ್ಛತಾ ಆಂದೋಲನ ಕಾರ್ಯ ಶ್ಲಾಘನೀಯ – ಸತೀಶ್ ಹೆಚ್ ಕುಂದರ್

0
175

Click Here

Click Here

ಕೋಟ ರಾ.ಹೆದ್ದಾರಿಯಲ್ಲಿ ಅಪ್ಪು ಅಟ್ಯಾಕರ್ಸ್ ಸ್ವಚ್ಛತಾ ಅಭಿಯಾನ

ಕುಂದಾಪುರ ಮಿರರ್ ಸುದ್ದಿ…
ಕೋಟ :ಸ್ವಚ್ಛತಾ ಅಭಿನಯಾನದಲ್ಲಿ ಹೆಚ್ಚು ಹೆಚ್ಚು ಯುವಮನಸ್ಸುಗಳು ಕಾರ್ಯನಿರ್ವಹಿಸಬೇಕು ಆಗ ಮಾತ್ರ ಪರಿಸರವನ್ನು ಸ್ವಚ್ಛವಾಗಿ ಇಡಲು ಸಾಧ್ಯ ಎಂದು ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಹೇಳಿದರು

Click Here

ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಪ್ಪು ಅಟ್ಯಾಕರ್ಸ್ ತಂಡದ ನೇತೃತ್ವದಲ್ಲಿ ಕೋಟ ಗ್ರಾಪಂಚಾಯತ್ ಸಹಕಾರದೊಂದಿಗೆ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಜನಸಾಮಾನ್ಯರಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ಅತ್ಯಗತ್ಯ ಈ ದಿಸೆಯಲ್ಲಿ ಪ್ರತಿಯೊಬ್ಬರೂ ಇದನ್ನು ಧ್ಯೇಯವಾಗಿರಿಸಿಕೊಂಡ ಮುನ್ನಡೆಯಬೇಕಾಗಿದೆ ಪ್ಲಾಸ್ಟಿಕ್ ಈ ಪರಿಸರಕ್ಕೆ ಬಾರಿ ಸಂಚಕಾರ ತಂದ್ದೊಡ್ಡುತ್ತಿದೆ ಇದರ ಬಳಕೆ ಬಗ್ಗೆ ಎಲ್ಲಾ ಭಾಗಗಳಲ್ಲಿ ಜಾಗೃತಿ ಮೊಳಗಲಿ ಆ ಮೂಲಕ ಪರಿಸರಕ್ಕೆ ನಮ್ಮಿಂದಾದ ಅಳಿಲು ಸೇವೆ ನೀಡುವಂತ್ತಾಗಲಿ ಎಂದು ಹಾರೈಸಿದರು.

ಸ್ವಚ್ಛತಾ ಅಭಿಯಾನದಲ್ಲಿ ಪರಿಸರದ ಪ್ರಮುಖರಾದ ವಿಷ್ಣುಮೂರ್ತಿ ಮಯ್ಯ, ಸತೀಶ್ ಹೆಚ್ ಕುಂದರ್,ಸದಾನಂದ ಬೆಳಗಾಂ, ನಾಗೇಶ್ ಪೂಜಾರಿ, ಭಾರತಿ ವಿಷ್ಣುಮೂರ್ತಿ ಮಯ್ಯ, ಗೋಪಾಲ್ ಶೆಟ್ಟಿ,ಅಪ್ಪು ಅಟ್ಯಾಕರ್ಸ್ ತಂಡದ ಸದಸ್ಯರು ಜೊತೆಗಿದ್ದರು.

Click Here

LEAVE A REPLY

Please enter your comment!
Please enter your name here