ಅಂಪಾರು :ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಾಲ ರಾಧೆ ಮತ್ತು ಬಾಲ ಕೃಷ್ಣ ಸ್ಪರ್ಧೆ

0
465

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಾಲ ರಾಧೆ ಮತ್ತು ಬಾಲ ಕೃಷ್ಣ ಸ್ಪರ್ಧೆಯನ್ನು ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಸುಮಾರು 70 ಮಕ್ಕಳು ಕೃಷ್ಣ, ರಾಧೆಯ ಪೋಷಾಕು ಧರಿಸಿ ಕಣ್ಮನ ಸೆಳೆದರು. ಹಾಡು ನೃತ್ಯದ ಮೂಲಕ ಮನೊರಂಜನಾ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

ನೂರಾರು ಪೋಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಮಕ್ಕಳಲ್ಲಿ ಪರಮಾತ್ಮನ ಸ್ವರೂಪ ಕಂಡು ಧನ್ಯತಾ ಭಾವ ಅನುಭವಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ರಂಜನಾ ಪ್ರಭು ಶ್ರೀ ರಾಮ ಕ್ಯಾಶ್ಯೂಸ್ ಕಂಚಾರು ಮತ್ತು ರಾಜೀವ ಶೆಟ್ಟಿ, ನಿವೃತ್ತ ಅಧ್ಯಾಪಕರು ಶಾನ್ಕಟ್ಟು ಇವರು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಮಂಜು ಮೊಗವೀರ ನಿವೃತ್ತ ಸೈನಿಕರು ಮತ್ತು ಜ್ಯೋತಿ ಉದಯ ಕುಮಾರ್ ಶೆಟ್ಟಿ ಮೂಡುಬಗೆ ಇವರು ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

Click Here

ಸಂಸ್ಥೆಯ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಇವರು ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡುತ್ತ ಮಕ್ಕಳಿಗೆ ಶ್ರೀಕೃಷ್ಣ ನ ಆದರ್ಶ ಸಂದೇಶವನ್ನು ಪೋಷಕರು ತಿಳಿಸಬೇಕು ಆಗ ಮಕ್ಕಳಿಗೆ ದೈವ ಪ್ರಜ್ಞೆ ಬೆಳೆಯುತ್ತದೆ ಇದರಿಂದ ಮಕ್ಕಳು ಕೆಟ್ಟ ವಿಚಾರಗಳಿಂದ ದೂರ ಉಳಿಯುತ್ತಾರೆ. ನಮ್ಮ ಪ್ರತೀ ಕರ್ಮವು ಧರ್ಮದ ಆಧಾರದಲ್ಲಿ ಇದ್ದಾಗ ನಾವು ಎಲ್ಲಾ ಪಾತ್ರಗಳನ್ನೂ ಪರಿಪೂರ್ಣವಾಗಿ ಮಾಡಲು ಸಾಧ್ಯ ಎಂದರು.

ಪೋಷಕರು ಹಾಗೂ ಇಂದಿನ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಸತೀಶ್ ಕುಮಾರ್ ಶೆಟ್ಟಿ ಮೂಡುಬಗೆ‌ ಇವರು ಶ್ರೀ ಕೃಷ್ಣ ನ ಅವತಾರದ ಕುರಿತು, ಅವನ ಲೀಲೆ, ಸಂಪೂರ್ಣತೆ ಕುರಿತು ಅತ್ಯಂತ ಸುಂದರವಾಗಿ ತಮ್ಮ ವಿಚಾರಗಳನ್ನು ಪ್ರಸ್ತುತ ಪಡಿಸಿದರು .

ಆಡಳಿತ ಮಂಡಳಿ ಅಧ್ಯಕ್ಷರೂ, ಇಂದಿನ ಕಾರ್ಯಕ್ರಮದ ಅಧ್ಯಕ್ಷರೂ ಆದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಇವರು ಸಂಸ್ಥೆಯು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸುತ್ತಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆ ಆಗುತ್ತಿದೆ ಎಂದು ತಿಳಿಸಿ ಆಗಮಿಸಿದ ಗಣ್ಯರಿಗೆ, ಪೋಷಕರಿಗೆ, ಮಕ್ಕಳಿಗೆ ಜನ್ಮಾಷ್ಟಮಿಯ ಶುಭಾಶಯಗಳನ್ನು ತಿಳಿಸಿದರು. ಕಾರ್ಯದರ್ಶಿಯವರಾದ ಶಾನ್ಕಟ್ಟು ನವೀನ್ ಕುಮಾರ್ ಶೆಟ್ಟಿ ಇವರು ಶಾಲೆಯ ಅಭಿವೃದ್ಧಿ ತ್ವರಿತ ಗತಿಯಲ್ಲಿ ಆಗುತ್ತಿದ್ದು ಕೆಲವೇ ವರ್ಷಗಳಲ್ಲಿ ಇದು ಬಹು ದೊಡ್ಡ, ಮಾದರಿ ವಿದ್ಯಾಸಂಸ್ಥೆಯಾಗಿ ಬೆಳೆಯಲಿದೆ ಎಂದು ಅಭಿಪ್ರಾಯಪಟ್ಟರು.

ನಿರ್ದೇಶಕರಾದ ಅಶೋಕ್ ಅಂಪಾರು ಮತ್ತು ಅರುಣ್ ಕುಮಾರ್ ಶೆಟ್ಟಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

Click Here

LEAVE A REPLY

Please enter your comment!
Please enter your name here