ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಆಗಸ್ಟ್ 25 ರಂದು ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಮಾತನಾಡಿ 65 ವರ್ಷಗಳ ಇತಿಹಾಸವಿರುವ ಈ ಸಂಘವು ಅಭಿವೃದ್ಧಿಯತ್ತ ಸಾಗುತ್ತಿದೆ. ಪಡಿತರ ವಿತರಣೆಯ ಜವಾಬ್ದಾರಿಯೊಂದಿಗೆ ಬ್ಯಾಂಕಿಂಗ್ ವ್ಯವಹಾರ ಮಾಡುತ್ತಾ ಲಾಭಗಳಿಸುತ್ತಾ ಬಂದಿದೆ. ಕೃಷಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಈ ಬಾರಿ 38 ಲಕ್ಷ ರೂ. ಲಾಭ ಗಳಿಸಿದ್ದು 10% ಡಿವಿಡೆಂಡ್ ನೀಡಲಾಗುವುದು ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್. ಶೋಭಾ ಕೃಷ್ಣ ವರದಿ ಮಂಡಿಸಿದರು. ವರದಿ ವರ್ಷಾಂತ್ಯಕ್ಕೆ 8.467 ಸದಸ್ಯರಿದ್ದು, 28,36,935 ಪಾಲು ಬಂಡವಾಳ ಹೊಂದಿದೆ. ರೂ.21,93,62,177 ಠೇವಣಿ ಹೊಂದಿದ್ದು, ವರದಿ ವರ್ಷದಲ್ಲಿ ರೂ. 37,80,459 ಲಾಭ ಗಳಿಸಿದೆ.
ಇದೇ ಸಂದರ್ಭದಲ್ಲಿ ಸಂಘದ ನಿರ್ದೇಶಕರಾಗಿದ್ದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾಗಿ ನಿವೃತ್ತಿ ಹೊಂದಿದ ಅರುಣ್ ಕುಮಾರ್ ಎಸ್.ವಿ. ಯವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ ಬಾಳೆಕೆರೆ, ಎಂ. ಮೋಹನ್ ದಾಸ್ ಶೆಟ್ಟಿ ಮಲ್ಯಾಡಿ, ಎಸ್. ರಾಜು ಪೂಜಾರಿ, ಕೆ. ಮೋಹನ ಪೂಜಾರಿ, ಆನಂದ ಬಿಲ್ಲವ, ಕೆ. ಭುಜಂಗ ಶೆಟ್ಟಿ, ರವಿ ಗಾಣಿಗ, ಪ್ರಭಾಕರ ಶೆಟ್ಟಿ, ಎನ್. ಜಯರಾಮ ಶೆಟ್ಟಿ. ಕೆ. ಸುಧಾಕರ ಶೆಟ್ಟಿ, ಹೆಚ್. ದಿನಪಾಲ ಶೆಟ್ಟಿ. ಎಚ್. ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.











