ಕುಂದಾಪುರ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷರಾಗಿ ಮೋಹನದಾಸ್ ಶೆಣೈ ಉಪಾಧ್ಯಕ್ಷರಾಗಿ ವನಿತಾ ಎಸ್ ಬಿಲ್ಲವ ಆಯ್ಕೆ

0
308

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕಳೆದ ಒಂದು ವರ್ಷದಿಂದ ಆಡಳಿತ ಸಮಿತಿ ಇಲ್ಲದೇ ಕಂಗಾಲಾಗಿದ್ದ ಕುಂದಾಪುರ ಪುರಸಭೆಯ ಎರಡನೇ ಅವಧಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಮೋಹನದಾಸ್ ಶೆಣೈ ಆಯ್ಕೆಯಾಗಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಖಾರ್ವಿ ಅವರನ್ನು 16 -8 ಮತಗಳ ಅಂತರದಲ್ಲಿ ಸೋಲಿಸಿದರು. ಉಪಾಧ್ಯಕ್ಷರಾಗಿ ಬಿಜೆಪಿಯ ಸಾಮಾನ್ಯ ಮಹಿಳಾ ಸದಸ್ಯೆ ವನಿತಾ ಎಸ್ ಬಿಲ್ಲವ ಆಯ್ಕೆಯಾದರು. ಕಾಂಗ್ರೆಸ್ ನ ಕಮಲಾ ಪೂಜಾರಿಯವರನ್ನು ಅದೇ ಅಂತರದಲ್ಲಿ ಸೋಲಿಸಿದ್ದರು. ಚುನಾವಣೆಯ ಸಂದರ್ಭ ಪುರಸಭೆಯ ಸದಸ್ಯೆ ಲಕ್ಷ್ಮೀ ಬಾಯಿ ಗೈರು ಹಾಜರಾಗಿದ್ದರು.

Click Here

ಕುಂದಾಪುರ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳಿವೆ. ಅದರಲ್ಲಿ 14 ಜನ ಬಿಜೆಪಿ ಸದಸ್ಯರಿದ್ದಾರೆ. 8 ಕಾಂಗ್ರೆಸ್ ಸದಸ್ಯರು ಹಾಗೂ 1 ಪಕ್ಷೇತರ ಸದಸ್ಯ. ಕುಂದಾಪುರ ಶಾಸಕರು ಹಾಗೂ ಸಂಸದರು ಸೇರಿದಂತೆ ಇಬ್ಬರಿಗೆ ಮತದಾನದ ಅವಕಾಶವಿತ್ತು. ಒಟ್ಟು 25 ಮತದಾರರಿದ್ದು, ನಿರೀಕ್ಷೆಯಂತೆ ಬಿಜೆಪಿಯ ಮೋಹನದಾಸ್ ಶೆಣೈ ಅವರಿಗೆ ಬಿಜೆಪಿಯ 14 ಮತ್ತು ಶಾಸಕ, ಸಂಸದರ 2 ಮತಗಳು ಸೇರಿ 16 ಮತಗಳು ಲಭಿಸಿವೆ. ಕಾಂಗ್ರೆಸ್ ಸದಸ್ಯ ಚಂದ್ರಶೇಖರ್ ಖಾರ್ವಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಕಾಂಗ್ರೆಸ್ಸಿನ 8 ಮತಗಳು ಬಿದ್ದಿವೆ. ಕುಂದಾಪುರ ತಹಸೀಲ್ದಾರ್ ಶೋಭಾ ಲಕ್ಷ್ಮೀ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉಪಸ್ಥಿತರಿದ್ದರು., ಪುರಸಭೆ ಮುಖ್ಯಾಧಿಕಾರಿ ಆನಂದ ನಿರ್ವಹಿಸಿದರು.

ಈ ಹಿಂದೆ ನಾಲ್ಕು ಬಾರಿ ಪುರಸಭೆಯ ಸದಸ್ಯರಾಗಿ, ಎರಡು ಬಾರಿ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮೋಹನದಾಸ ಶೆಣೈ ಅವರು ಮೂರನೇ ಬಾರಿಗೆ ಅಧ್ಯಕ್ಷರಾದಂತಾಗಿದೆ. ಚುನಾವಣಾ ಪ್ರಕ್ರಿಯೆಗೂ ಮುನ್ನ ಬಿಜೆಪಿಯ ಕಚೇರಿಯಲ್ಲಿ ಪುರಸಭಾ ಸದಸ್ಯರ ಸಭೆ ಕರೆಯಲಾಗಿತ್ತು. ಆಕಾಂಕ್ಷಿಗಳ ಅಸಮಾಧಾನ ಹೋಗಲಾಡಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದು, ಬಳಿಕ ಮೋಹನದಾಸ್ ಶೆಣೈ ಹಾಗೂ ವನಿತಾ ಬಿಲ್ಲವ ಅವರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಪಕ್ಷ ಸೂಚನೆ ನೀಡಿತ್ತು.

Click Here

LEAVE A REPLY

Please enter your comment!
Please enter your name here