ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಗೌಡಸಾರಸ್ವತ ಸುಮಂಗಲೆಯರ ಶ್ರಾವಣಮಾಸದ ವಿಶೇಷ ಧಾರ್ಮಿಕ ಕಾರ್ಯಕ್ರಮ, “ಚೂಡಿ ಪೂಜೆ”.ಇದು ಶ್ರಾವಣ ಮಾಸದಲ್ಲಿ ಪ್ರಕೃತಿಯಲ್ಲಿ ಸಿಗುವ ವಿಶೇಷ ಹೂವು, ಸಸ್ಯಗಳನ್ನು ಸೇರಿಸಿ ಹೂವಿನ ಚಿಕ್ಕ ಬೊಕ್ಕೆ ಕಟ್ಟಿ ತುಳಸಿ ಕಟ್ಟೆ ಎದುರು ಮಾಡುವ ಪೂಜೆ. ನಂತರ ಮನೆಯ ಹೊಸ್ತಿಲಿಗೆ ಪೂಜೆ ಮಾಡಿ, ದೇವರ ಎದುರು ಚೂಡಿ ಇಟ್ಟು ಪೂಜೆ ಸಲ್ಲಿಸುತ್ತಾರೆ. ಸುಮಂಗಲೆಯರು ಹಿರಿಯರಿಗೆ ಚೂಡಿ, ತಾಂಬೂಲ ನೀಡಿ ಆಶೀರ್ವಾದ ಪಡೆಯುವುದು ಸಂಪ್ರದಾಯ.
ಅಂತೆಯೇ ಅಂಪಾರು ಶ್ರೀ ರಾಮ ಮಂದಿರದಲ್ಲಿ ಗೋಕರ್ಣ ಪರ್ತಗಾಳಿ ಮಠಾಧೀಶರ ಮಾರ್ಗ ದರ್ಶನದಲ್ಲಿ ನಡೆಯುತ್ತಿರುವ “ಶ್ರೀ ರಾಮನಾಮ ತಾರಕ ಜಪ ” ದ ಸುಸಂದರ್ಭದಲ್ಲಿ ಶ್ರಾವಣ ಮಾಸದ ಕೊನೆಯ ಭಾನುವಾರದಂದು ಸಾಮೂಹಿಕ ಚೂಡಿ ಪೂಜೆ ನೆರವೇರಿತು. ಮುಂಜಾನೆ 8 ಗಂಟೆಗೆ ಗ್ರಾಮದ ಗೌಡಸಾರಸ್ವತ ಸಮಸ್ತ ಸುಮಂಗಲೆಯರು ಮಡಿಯಲ್ಲಿ ಬಂದು ಸೇರಿ “ಚೂಡಿ ಪೂಜೆ” ಮಾಡಿದರು. ವೇದಮೂರ್ತಿ ಶ್ರೀ ಪ್ರಸನ್ನ ಭಟ್ ಮಾರ್ಗದರ್ಶನ ಮಾಡಿದರು. ಮಂದಿರದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್, ಕಾರ್ಯದರ್ಶಿ ದೇವದಾಸ ಪ್ರಭು, ಕೋಶಾಧಿಕಾರಿ ರಘುವೀರ ಕಿಣಿ, ಅಂಪಾರು ಗ್ರಾಮಪಂಚಾಯತ್ ನ ಅಧ್ಯಕ್ಷ ಗೋಪಾಲಕೃಷ್ಣ ಕಿಣಿ ಮೊದಲಾದ ಹತ್ತು ಸಮಸ್ತರು ಉಪಸ್ಥಿತರಿದ್ದರು.











