ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಕೋಟದ ಹಂದಟ್ಟು ಪರಿಸರದಲ್ಲಿ ಗೆಳೆಯರ ಬಳಗ ಹಂದಟ್ಟು ನೇತೃತ್ವದಲ್ಲಿ ಕೆಸ್ರ್ ಓಕ್ಳಿ ಎಂಬ ಕುಂದಗನ್ನಡದ ಗ್ರಾಮೀಣ ಕ್ರೀಡೆಗಳ ತಿಲ್ಲಾನ ಕಾರ್ಯಕ್ರಮ ಭಾನುವಾರ ಜರಗಿತು.
ಕಾರ್ಯಕ್ರಮವನ್ನು ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಜಾನಕಿ ಹಂದೆ ಉದ್ಘಾಟಿಸಿ ಶುಭ ಹಾರೈಸಿದರು.
ಹಂದಟ್ಟು ಗೆಳೆಯರ ಬಳಗದ ಅಧ್ಯಕ್ಷ ಪ್ರಕಾಶ್ ಹಂದಟ್ಟು ಕೆಸರು ಗದ್ದೆಗೆ ಹಾಲೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗೆಳೆಯರ ಬಳಗದ ಯುವ ಮುಂದಾಳು ಕಿರಣ್ ಪೂಜಾರಿ ದೈವ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ತೆಂಗಿನ ಕಾಯಿ ಒಡೆದರು.
ಕಾರ್ಯಕ್ರಮದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾಮಂಡಲದ ಸಂಚಾಲಕಿ ಸುಜಾತ ಬಾಯರಿ, ಹಂದಟ್ಟು ಗೆಳೆಯರ ಬಳಗದ ಪ್ರಮುಖರಾದ ರಾಜೇಶ್ ಪೂಜಾರಿ, ಆನಂದ್ ಪೂಜಾರಿ, ಶೇಖರ್ ಪೂಜಾರಿ, ಭಾಸ್ಲರ್ ಪೂಜಾರಿ, ಕೃಷ್ಣ ಪೂಜಾರಿ ಮತ್ತಿತರರು ಇದ್ದರು.
ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ,ಸುಜಾತ ಬಾಯರಿ ನಿರ್ವಹಿಸಿದರು.
ವಿವಿಧ ಕ್ರೀಡೆ – ಮಕ್ಕಳದ್ದೆ ಕಲವರ
ಪ್ರಸ್ತುತ ಆಧುನಿಕ ಕಾಲಘಟ್ಟದಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ದಿನಗಳಲ್ಲಿ ಕೆಸರು ಗದ್ದೆಯ ಮೂಲಕ ಗ್ರಾಮೀಣ ಕ್ರೀಡೆಗಳನ್ನು ಉಳಿಸಲು ಸಾಧ್ಯವಿದೆ ಎಂಬುವುದನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ಇಂಥಹ ಕಾರ್ಯಕ್ರಮಗಳ ಮೂಲಕ ಸಾಬೀತುಗೊಂಡಿದೆ ಅಂತಹ ಕ್ರೀಡೆಗಳಲ್ಲಿ ಯುವ ಸಮೂಹ ಹಾಗೂ ಮಾತೆಯರು ಹೆಚ್ಚಾಗಿ ಭಾಗವಹಿಸುತ್ತಿರುವುದು ಗ್ರಾಮೀಣ ಕ್ರೀಡೆಗಳಿಗೆ ಮರುಜೀವ ತುಂಬಿದಂತೆ ಈ ಹಿನ್ನಲ್ಲೆಯಲ್ಲಿ ಹಗ್ಗಜಗ್ಗಾಟ, ಮೊಸರು ಕುಡಿಕೆ, ಕೆಸರು ಗದ್ದೆ ಓಟ, ವಿವಿಧ ರೀತಿಯ ಆಟಗಳು ವಿಶೇಷವಾಗಿ ಗಮನ ಸೆಳೆದವು.











