ಹಂಗಳೂರು ಲಯನ್ಸ್ ಕ್ಲಬ್ ನಿಂದ ಬಸ್ರೂರು ಬಿ. ಎಂ. ಶಾಲೆಯಲ್ಲಿ ಆಸಾಡಿ ಒಡ್ರ ಆಚರಣೆ

0
159

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಬಸ್ರೂರಿನ ಬಿ. ಎಂ. ಶಾಲೆಯಲ್ಲಿ ಕುಂದಾಪುರ ಕನ್ನಡದಲ್ಲಿ ಆಸಾಡಿ ತಿಂಗಳ ವಿಶಿಷ್ಟ ಕಾರ್ಯಕ್ರಮ ಆಸಾಡಿ ಒಡ್ರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ನಿವೃತ್ತ ಮುಖ್ಯ ಶಿಕ್ಷಕರಾದ ಲಯನ್ ಕೆ. ವಿ. ಬಾಲಚಂದ್ರ ಶೆಟ್ಟಿಯವರು ವಿಶಿಷ್ಟ ಶೈಲಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದರು.

Click Here

ವಲಯಾಧ್ಯಕ್ಷ ಲಯನ್ ಹೆಚ್ ಬಾಲಕೃಷ್ಣ ಶೆಟ್ಟಿ ಆಸಾಡಿ ಹಬ್ಬದ ಬಗ್ಗೆ ಮಾಹಿತಿ ನೀಡಿದರು. ಸುವರ್ಣ ಲತಾ ಆಸಾಡಿ ತಿಂಗಳ ಹಿಂದಿನ ಕಾಲದ ಆಚರಣೆಗಳನ್ನು ಮೆಲುಕು ಹಾಕಿದರು.

ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ಲಯನ್ ರೋವನ್ ಡಿ’ಕೋಸ್ತ್  ಶಾಲಾ ಮುಖ್ಯೋಪಾಧ್ಯಾಯ ದಯಾನಂದ್ ಬಳ್ಕೂರು, ಲಯನ್ ಸುಜಯ್ ಜತನ್, ಲಯನ್ಸ್ ಮ್ಯಾಥ್ಯೂ ಜೋಸೆಫ್ ,ಲಯನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕುಂದ ಕನ್ನಡದಲ್ಲಿ ಜಾನಪದ ಹಾಡು, ನೃತ್ಯ ಮತ್ತಿತರ ಸಾಂಪ್ರದಾಯಿಕ ಆಚರಣೆಗಳನ್ನು ಹಮ್ಮಿಕೊಳ್ಳಲಾಯಿತು. ಹಿಂದಿನ ಕಾಲದಲ್ಲಿ ಆಷಾಡ ಮಾಸದಲ್ಲಿ ಬಳಸುವ ಆಹಾರ ಪದ್ಧತಿಯ ಅಡುಗೆ ಊಟ ಸವಿದರು.

Click Here

LEAVE A REPLY

Please enter your comment!
Please enter your name here