ಲಯನ್ಸ್ ಕ್ಲಬ್ ಹಂಗಳೂರು ವತಿಯಿಂದ ಬಸ್ರೂರು ಬಿ. ಎಂ. ಶಾಲೆಗೆ ಸಮವಸ್ತ್ರ ಮತ್ತು ನೋಟ್ ಪುಸ್ತಕ ವಿತರಣೆ

0
153

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ನೂತನ ಶಾಲಾ ವರ್ಷದಲ್ಲಿ ಕಲಿಯುತ್ತಿರುವ ಶಾಲೆಯ ಎಲ್ಲಾ ಮಕ್ಕಳಿಗೆ ಲಯನ್ ಕೆ. ವಿ. ಬಾಲಚಂದ್ರ ಶೆಟ್ಟಿಯವರು ಕೊಡಮಾಡಿದ ಸಮವಸ್ತ್ರಗಳನ್ನು ಮತ್ತು ಗೀತಾ ಫೌಂಡೇಶನ್ ವತಿಯಿಂದ ನೀಡಿದ ನೋಟ್ ಪುಸ್ತಕಗಳ ವಿತರಣೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರೋವನ್ ಡಿ’ಕೋಸ್ತ್ ಮೂಲಕ ವಿತರಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತರಬೇತಿ ನೀಡಿದ ತರಬೇತುದಾರರನ್ನು ಗೌರವಿಸಿ ಸತ್ಕರಿಸಲಾಯಿತು.

ಶಾಲೆಯ ಆಡಳಿತ ಕಾರ್ಯದರ್ಶಿ ಲಯನ್ ಸುಜಯ ಜತನ್ನ ಅಧ್ಯಕ್ಷತೆ ವಹಿಸಿದ್ದರು.

Click Here

ದಾನಿಗಳೂ ಈ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರು ಆಗಿದ್ದ ಲಯನ್ ಬಾಲಚಂದ್ರ ಶೆಟ್ಟಿ ಕೆ. ವಿ. ಅವರು ಪ್ರಸ್ತಾವನೆ ಯಲ್ಲಿ ಈ ಶಾಲೆ ನನ್ನ ಜೀವನ ರೂಪಿಸಿದ್ದು ಅದರ ಋಣ ಈ ಮೂಲಕ ತೀರಿಸುತ್ತಿದ್ದೇನೆ ಎಂದರು.

ವಲಯಾಧ್ಯಕ್ಷ ಲಯನ್ ಹೆಚ್. ಬಾಲಕೃಷ್ಣ ಶೆಟ್ಟಿ ಶುಭಾಶಂಸನೆಗೈದರು.

ಲಯನ್ ಮ್ಯಾಥ್ಯೂ ಜೋಸೆಫ್, ನಿವೃತ್ತ ಶಿಕ್ಷಕಿ ಸುವರ್ಣ ಲತಾ, ಸಿ ಆರ್ ಪಿ ಸುಮನಾ ಲಯನ್ ಸದಸ್ಯರು ಪೋಷಕರು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಮನೋಹರ್ ಲಮಾಣಿ ವಂದಿಸಿದರು.

Click Here

LEAVE A REPLY

Please enter your comment!
Please enter your name here