ಕೊಲ್ಲೂರು: ನಾಡಿನ ಸುಭಿಕ್ಷೆಗಾಗಿ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ ಸಂಸದ ರಾಘವೇಂದ್ರ

0
238

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ನಾಡಿನ ಶಕ್ತಿ ದೇವತೆಗಳಲ್ಲಿ ಒಂದಾದ ಬೈಂದೂರಿನ ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಾನಕ್ಕೆ ಇಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡು ಅತೀವ ಮಳೆಯಿಂದ ಅತಿವೃಷ್ಟೀ ಮತ್ತು ಅನಾವೃಷ್ಟೀ ಎದುರಿಸುತ್ತಿದ್ದು ಸಂಕಷ್ಟದಲ್ಲಿರುವ ಜನಸಾಮಾನ್ಯರನ್ನು ರಕ್ಷಿಸುವಂತೆ ಪ್ರಾರ್ಥಿಸಲಾಯಿತು.

ಈ ಸಂದರ್ಭ ಪ್ರತಿಕ್ರಿಯಿಸಿದ ಸಂಸದ ಬಿ.ವೈ.ರಾಘವೇಂದ್ರ, ಉತ್ತಮ ವರ್ಷಧಾರೆಯಿಂದ ಜಲಾಶಯಗಳು ಭರ್ತಿಯಾಗಿ ನಾಡಿನ ರೈತಾಪಿ ವರ್ಗದಲ್ಲಿ ಹೊಸ ಮಂದಹಾಸ ಮೂಡಿದ್ದು ಇದೇ ರೀತಿ ನಾಡು ಸುಭಿಕ್ಷವಾಗಿ ತುಂಬಿರಲಿ ಎಂದು ವಿಶೇಷವಾಗಿ ಕೇಳಿಕೊಳ್ಳಲಾಗಿದೆ. ಈಗಾಗಲೇ ಕೇಂದ್ರ ಸಚಿವರಲ್ಲಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ “ಕೊಲ್ಲೂರು ಮೂಕಾಂಬಿಕಾ ಕಾರಿಡಾರ್” ಗೆ ಪ್ರಸ್ತಾವನೆ ಸಲ್ಲಿಸಿದ್ದು ತಾಯಿಯ ಕೃಪಾಶೀರ್ವಾದದಿಂದ ಶೀಘ್ರದಲ್ಲೇ ಇದಕ್ಕೆ ಅನುಮೋದನೆ ದೊರಕುವ ಆಶಾಭಾವ ಮೂಡಿದೆ ಎಂದರು.

Click Here

LEAVE A REPLY

Please enter your comment!
Please enter your name here