ಕುಂದಾಪುರದ ಸಂಪ್ರದಾಯಗಳ ತಿಳಿಸುವ ಕಲಾತ್ಮಕ ಕಿರುಚಿತ್ರ ಕ್ಯಾನಿಮುಡಿ

0
212

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ನಮ್ಮ ಕರಾವಳಿ ಕುಂದಾಪುರ ಭಾಗದಲ್ಲಿ ಅನೇಕ ಸಂಪ್ರದಾಯ ರೀತಿ ರಿವಾಜುಗಳು ಅತೀ ಪುರಾತನವಾಗಿದೆ. ಇವತ್ತು ಅಂತಹ ಅಪರೂಪದ ಸಂಪ್ರದಾಯಗಳನ್ನು ಕಾಣಲು ಸಾಧ್ಯವಿಲ್ಲ. ಆದರೆ ಅವುಗಳನ್ನು ದಾಖಲೀಕರಣ ಮಾಡಿ ಈವಾಗಿನ ಪೀಳಿಗೆಗೆ ಹಾಗೂ ಮುಂದಿನ ಪೀಳಿಗೆಗೆ ಅದರ ಮಹತ್ವ ತಿಳಿಸುವ ಉದ್ದೇಶದಿಂದ “ಕ್ಯಾನಿಮುಡಿ” ಎನ್ನುವ ಕಲಾತ್ಮಕ ಕಿರುಚಿತ್ರವನ್ನು ಸಿದ್ಧಪಡಿಸಲಾಗಿದೆ. ಜಿ.ಕೆ ಸ್ಟುಡಿಯೋ & ಫಿಲಂಸ್ ಎನ್ನುವ ಯೂಟ್ಯೂಬ್ ವಾಹಿನಿಯ ಮೂಲಕ ಈ ಕಿರುಚಿತ್ರ ಒಂದು ತಿಂಗಳೊಳಗೆ 51 ಸಾವಿರಕ್ಕೂ ಹೆಚ್ಚು ವೀಕ್ಷಕರನ್ನು ತಲುಪಿದೆ. ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ‘ಕ್ಯಾನಿಮುಡಿ’ ಕಿರುಚಿತ್ರದ ನಿರ್ದೇಶಕ ಗುರು ಕುಂದಾಪುರ ಹೇಳಿದರು.

Click Here

ಅವರು ಕುಂದಾಪುರದ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಮ್ಮ ಕರಾವಳಿ ಭಾಗದಲ್ಲಿ ಕರ್ಕಾಟಿ ಅಮಾವಾಸೆಯ ದಿನದಂದು ಮಾಡುವಂತ ಒಂದು ಸಂಪ್ರದಾಯವನ್ನು ಎಳೆ ಎಳೆಯಾಗಿ ಒಂದು ಕಥೆಯ ಹಂದರದೊಂದಿಗೆ ತೋರಿಸಲಾಗುತ್ತದೆ. ಕೋಣಗಳಿಗೆ ಎರ್ಥ ಕೊಡುವಂತಹದ್ದು, ಕ್ಯಾನಿ ಗೆಂಡೆ ಹಿಟ್ಟು ಮಾಡಿ ಪೂಜೆ ಮಾಡುವುದು. ಅದರ ತಯಾರಿಯ ಜೊತೆಗೆ ಅದರ ಮಹತ್ವವನ್ನು ತಿಳಿಸುವ ಪ್ರಯತ್ನವನ್ನು ಈ ಕಿರುಚಿತ್ರದಲ್ಲಿ ಮಾಡಿದ್ದೇವೆ ಎಂದರು.
ಈ ಕಿರುಚಿತ್ರದ ಪೆÇೀಸ್ಟರ್ ಅನ್ನು ಖ್ಯಾತ ಚಲನಚಿತ್ರ ನಟ ಪ್ರಮೋದ್ ಶೆಟ್ಟಿ ಬಿಡುಗಡೆಗೊಳಿಸಿದ್ದರು. ಲಿರಿಕಲ್ ವಿಡಿಯೋ ಅನ್ನು ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಬಿಡುಗಡೆಗೊಳಿಸಿದ್ದರು. ಈ ಕಿರುಚಿತ್ರವನ್ನು ಸಂಗೀತ ನಿರ್ದೇಶಕ ರವಿ ಬಸ್ರೂರ್ ಬಿಡುಗಡೆಗೊಳಿಸಿದ್ದರು. ಜಿ.ಕೆ ಸ್ಟುಡಿಯೋ ಅಂಡ್ ಫಿಲಂಸ್ ಎನ್ನುವ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾಗಿದೆ ಎಂದರು.
ಕುಂದಾಪುರ, ಉಪ್ಪುಂದ ಭಾಗದಲ್ಲಿ ಚಿತ್ರೀಕರಣ ನಡೆದಿದ್ದು ಮುಖ್ಯ ಭೂಮಿಕೆಯಲ್ಲಿ ಹಿರಿಯ ನಟ, ಕಾಂತಾರ ಖ್ಯಾತಿಯ ಉದಯ ಹಾಲಂಬಿ, ಪ್ರತಿಮಾ ನಾಯಕ್, ಜ್ಯೋತಿ ಕೊಡ್ಲಾಡಿ, ನಾಗರಾಜ್ ವಿಠಲವಾಡಿ, ಗುರು ಕುಂದಾಪುರ, ಗಜ್ಮೈಕು ನಾಗರಾಜ್, ಶಿಲ್ಪ ಕುಮಟ, ಸಿಂಚನ ಕೋಡಿ ನಟಿಸಿದ್ದಾರೆ ಎಂದರು.
ತಾಂತ್ರಿಕ ವರ್ಗದಲ್ಲಿ ಚಿತ್ರಕಥೆ, ನಿರ್ದೇಶನ, ಗುರುಕುಂದಾಪುರ, ಛಾಯಾಗ್ರಹಣ, ಸಂಕಲನ-ಶಂಕರನಾರಾಯಣ ಪೆರ್ಡೂರು, ಕಥೆ-ಸಂಭಾಷಣೆ-ನಾಗರಾಜ್ ವಿಠಲವಾಡಿ, ಸಂಗೀತ ಯತಿರಾಜ್ ಉಪ್ಪೂರು, ಕಲರಿಂಗ್ ರಾಹುಲ್ ವಸಿಷ್ಟ, ಮೇಕಪ್-ರೇಖಾ ಕುಂದಾಪುರ, ಕಲೆ-ರಾಜೇಶ್ ಕೆರ್ಗಾಲ್, ಸುಬ್ರಹ್ಮಣ್ಯ, ಬೆಳಕು-ವಿಶು ಸಿದ್ಧಾಪುರ, ಅಜಿತ್ ಯಾದವ್, ಡ್ರೋನ್-ವಿನಯ ಉಳ್ಳೂರು, ಸಬ್ ಟೈಟಲ್-ಕ್ಲಿಂಗ್ ಜಾನ್ಸನ್, ಸಹಾಯಕ ಛಾಯಾಗ್ರಾಹಣದಲ್ಲಿ ಶಿವು ಗೋಡೆ, ಪ್ರೋಡಕ್ಷನ್ ಮ್ಯಾನೇಜರ್ ಗಜ್ಮೈಕು ನಾಗರಾಜ್, ವಿನ್ಯಾಸ-ವಿಜಿತ್ ಮಲ್ಯಾಡಿ, ಅಭಿಷೇಕ್ ಎನ್.ಚಂದನ್, ಮೇಕಿಂಗ್-ನವೀನ್ ಕುಮಾರ್ ಎ ಅವರ ಸಹಕಾರವಿದೆ ಎಂದರು.
ನಾನು ಕಳೆದ 15 ವರ್ಷದಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಸಿನಿಮಾ ರಂಗದಲ್ಲೂ ಕೆಲಸ ಮಾಡಿದ್ದೇನೆ. ಜರ್ನಿ, ಕರ್ಕಾಟಿ ಅಮಾಸಿ, ಈಗ ಕ್ಯಾನಿಮುಡಿ ಇವು ನನ್ನ ನಿರ್ದೇಶನದ ಕಿರುಚಿತ್ರಗಳು. ಈ ಕಿರುಚಿತ್ರ ಈಗಾಗಲೆ ಉತ್ತಮ ಪ್ರಶಂಸೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಸ್ಪರ್ಧೆಗಳಿಗೆ ಕಳುಹಿಸುವ ಚಿಂತನೆಯೂ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟ ಉದಯ ಹಾಲಂಬಿ, ನಾಗರಾಜ್ ವಿಠಲವಾಡಿ, ಚಿತ್ರತಂಡದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here