ಶ್ರೀ ಕ್ಷೇತ್ರ ಅಮೃತೇಶ್ವರಿ ದಶಾವತಾರ ಮೇಳ ಪ್ರಥಮ ಸೇವೆಯಾಟ- ಯಕ್ಷಕಿನ್ನರ ಹಾಗೂ ನಾರಾಯಣಪ್ಪ ಉಪ್ಪೂರ ಪ್ರಶಸ್ತಿಗೆ ಆಯ್ಕೆ

0
583

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಶ್ರೀ ಕ್ಷೇತ್ರ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದ ವತಿಯಿಂದ ನಡೆಸಲ್ಪಡುವ ದಶಾವತಾರ ಯಕ್ಷಗಾನ ಮಂಡಳಿ ಇದರ 2021-22ರ ಪ್ರಥಮ ಸೇವೆಯಾಟ ಇದೇ ಬರುವ ಡಿಸೆಂಬರ್ 5ರಂದು ಭಾನುವಾರ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.

ಆ ಪ್ರಯುಕ್ತ ಪೂರ್ವಾಹ್ನ 11ಗ ಗಣಹೋಮ,ಗಣಪತಿ ಪೂಜೆ,ರಾತ್ರಿ 9ಗ ಪ್ರಥಮ ಯಕ್ಷಗಾನ ಸೇವೆಯಾಟ ಜರಗಲಿದೆ

Click Here

ಕೋಟ ವೈಕುಂಠ ಯಕ್ಷಕಿನ್ನರ ,ನಾರಾಯಪ್ಪ ಉಪ್ಪೂರ ಪ್ರಶಸ್ತಿ ಪ್ರದಾನ
ಪ್ರತಿ ವರ್ಷ ಶ್ರೀ ಕ್ಷೇತ್ರ ಅಮೃತೇಶ್ವರಿ ದಶಾವತಾರ ಮೇಳದ ಪ್ರಥಮ ಸೇವೆಯಾಟದ ಅಂಗವಾಗಿ ಶ್ರೀ ದೇವಳದ ವತಿಯಿಂದ ಇಬ್ಬರು ಯಕ್ಷ ಮಹಾನ್ ಸಾಧಕರಾದ ದಿ. ಕೋಟ ವೈಕುಂಠ ಹಾಗೂ ಪ್ರಾಚಾರ್ಯ ದಿ.ಎಮ್ ನಾರಾಯಣಪ್ಪ ಉಪ್ಪೂರ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿಗೆ ಪ್ರಸಿದ್ಧ ಸ್ತ್ರೀ ವೇಷದಾರಿ ರಾಜೀವ ಶೆಟ್ಟಿ ಹೊಸಂಗಡಿ, ಹಿರಿಯ ಭಾಗವತ ಕೆ.ಪಿ ಹೆಗಡೆಯವರಿಗೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಅಲ್ಲದೆ ಯಕ್ಷಗಾನ ಕಲಾವಿದ ಪ್ರಶಾಂತ್ ನೈಲಾಡಿ ವಿರಚಿತ ರಣಧಾರಿಣಿ ಪ್ರಸಂಗ ಬಿಡುಗಡೆ ಕೊಳ್ಳಲಿದೆ.ಬೆಳಕಿನ ಸೇವೆ ಹರಕೆ ಸೇವೆ ಸಲ್ಲಿಸುವವರು ಶ್ರೀ ದೇವಳದ ಕಛೇರಿಗೆ ಬಂದು ದಿನಾಂಕ ನೊಂದಾಯಿಸಿಕೊಳ್ಳಲು ಶ್ರೀ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here