ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಿಂದ ಸಂವಿಧಾನ ದಿನಾಚರಣೆ

0
748

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

Click Here

1949ರ ನವೆಂಬರ್ 26 ರಂದು ಅಂಗಿಕಾರಗೊಂಡ “ಸಂವಿಧಾನದ ಒಡವೆ” “ಸಂವಿಧಾನದ ಕೈದೀಪ” ಮತ್ತು “ರಾಜಕೀಯ ಜಾತಕ” ಎಂದೇ ಕರೆಯಲ್ಪಡುವ ಸಂವಿಧಾನದ ಪೂರ್ವಪೀಠಿಕೆಯಲ್ಲಿ, ಅಡಕವಾಗಿರುವ “ಸಾರ್ವಭೌಮ ಸಮಾಜವಾದಿ, ಪ್ರಜಾಸತ್ತಾತ್ಮಕ” ಪದಗಳನ್ನು ಅತ್ಯಂತ ಸೋದಾಹರಣವಾಗಿ ವಿವರಿಸುವುದರ ಮೂಲಕ ಸರ್ವ ಶೃದ್ಧಾ ಪೂರ್ವಕವಾಗಿ ಸಂವಿಧಾನದ ಆಶೋತ್ತರಗಳಿಗೆ ಬದ್ಧರಾಗಿರುವುದಕ್ಕೆ ಸಂಕಲ್ಪತೊಟ್ಟವರಾಗಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. ಈ ಅರ್ಥಗರ್ಭಿತ ಸಮಾರಂಭದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥಗಳ ಅಧ್ಯಕ್ಷರಾದ ಶ್ರೀ ಹಾಜಿ ಅಬ್ದುಲ್ ರೆಹಮಾನ್, ಆಡಳಿತ ನಿರ್ದೇಶಕರಾದ ಶ್ರೀ ದೋಮ ಚಂದ್ರಶೇಖರ್ ಮತ್ತು ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕ ವೃಂದ, ಶಿಕ್ಷಕೆತರ ವೃಂದ, ಸಂಸ್ಥೆಗಳ ಎಲ್ಲಾ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು. ಹಿರಿಯ ಶಿಕ್ಷಕರಾದ ಶ್ರೀ ಜಯಶೀಲ ಶೆಟ್ಟಿ ಯವರು ಸಂವಿಧಾನದ ಪೂರ್ವ ಪೀಠಿಕೆಯನ್ನು ಅರ್ಥಪೂರ್ಣವಾಗಿ ವಿವರಿಸುವುದರೊಂದಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

Click Here

LEAVE A REPLY

Please enter your comment!
Please enter your name here