ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಅಕ್ಷಯ್ ಗುಲ್ವಾಡಿ ನಿರ್ದೇಶನದ “ಕಾದಿರುವೆ ನಾನು” ಆಲ್ಬಮ್ ಸಾಂಗ್ ಅನ್ನು ಗುಲ್ವಾಡಿ ಗ್ರಾಮಸ್ಥರ ಹಿತರಕ್ಷಣಾ ವೇದಿಕೆಯಲ್ಲಿ ಖ್ಯಾತ ವಕೀಲರಾದ ರವಿಕಿರಣ್ ಮುರುಡೇಶ್ವರ ಅವರು ಹಾಡಿನ ಧ್ವನಿ ಮುದ್ರಣವನ್ನು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು ಪ್ರಕಾಶ್ ಪಡುಕೋಣೆ, ಮಂಜು ಗಂಗೊಳ್ಳಿ, ರವಿ ಬಸ್ರೂರು, ಯಾಖೂಬ್ ಖಾದರ್ ಗುಲ್ವಾಡಿಯಿಂದಾಗಿ ಕುಂದಾಪುರದ ಪಡುಕೋಣೆ, ಗಂಗೊಳ್ಳಿ, ಬಸ್ರೂರು ಹಾಗೂ ಗುಲ್ವಾಡಿ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಮುಂದೆಯೂ ಕೂಡ ಇವರಿಂದ ಹೆಚ್ಚಿನ ಕೆಲಸ ಕಾರ್ಯಗಳು ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನೀಲಾವರ ಸುರೇಂದ್ರ ಅಡಿಗ, ಸುಬ್ರಹ್ಮಣ್ಯ ಶೆಟ್ಟಿ, ಪರ್ತಕರ್ತರಾದ ಜಾನ್ ಡಿಸೋಜ, ಮೊದಲಾದವರು ಉಪಸ್ಥಿತರಿದ್ದರು. ಯಾಕುಬ್ ಖಾದರ್ ಗುಲ್ವಾಡಿಯವರು ಕಾರ್ಯಕ್ರಮ ನಿರೂಪಿಸಿದರು.
Watch:-