ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಲ್ಯಾಡಿ ಭಾಗದಲ್ಲಿ ಬಸ್ ತಂಗುದಾಣವಿಲ್ಲದೆ ಸಾರ್ವಜನಿಕರು ರಸ್ತೆಯಲ್ಲೆ ನಿಂತು ಅಪಾಯಕ್ಕೆ ಆಹ್ವಾನಿಸುವ ಸನ್ನಿವೇಶ ಕಳೆದ ಹಲವಾರು ವರ್ಷಗಳಿಂದ ಎದುರಾಗಿದೆ.
ಸಾಮಾನ್ಯವಾಗಿ ಸಿಟಿ ಪ್ರದೇಶದಿಂದ ಹಿಡಿದು ಗ್ರಾಮೀಣ ಹಳ್ಳಿಗಾಡಿನ ಹೆಚ್ಚಿನ ಒಳ ಭಾಗಗಳ ರಸ್ತೆಗಳಲ್ಲಿ ಬಸ್ ತಂಗುದಾಣಗಳನ್ನು ನೋಡುತ್ತೇವೆ ಆದರೆ ಇಲ್ಲಿನ ಮಲ್ಯಾಡಿ ಪ್ರದೇಶದಲ್ಲಿ ಸಾರ್ವಜನಿಕರಿಂದ ಹಿಡಿದು ಶಾಲಾ ಮಕ್ಕಳವರೆಗೆ ರಸ್ತೆಯ ಮೇಲೆ ನಿಂತು ಬಸ್ ಏರುವ ಸ್ಥಿತಿ ಅಪಾಯಕ್ಕೆ ಮುನ್ನುಡಿ ಬರೆಯುವಂತಿದೆ.ಈ ಬಗ್ಗೆ ಅಲ್ಲಿನ ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳ ಕದ ತಟ್ಟಿದರೂ ಪ್ರಯೋಜನ ಶೂನ್ಯವೆಂಬತ್ತಾಗಿದೆ ಈ ಹಿನ್ನಲ್ಲೆಯನ್ನು ಮನಗಂಡ ಸ್ಥಳೀಯರು ಬಸ್ ತಂಗುದಾಣಕ್ಕಾಗಿ ಆಗ್ರಹಿಸಿದ್ದಾರೆ.
ಬಾರಿ ಪ್ರಮಾಣದ ವಾಹನ ಸಂಚಾರ
ಈ ರಸ್ತೆಯಲ್ಲಿ ಸಾಮಾನ್ಯವಾಗಿ ಸಣ್ಣಪುಟ್ಟವಾಹನಗಳಿಗೆ ಸೀಮಿತಗೊಳ್ಳದೆ ಬಾರಿ ಪ್ರಮಾಣದ ಲಾರಿಗಳು ಸಂಚರಿಸುತ್ತವೆ ಅವುಗಳ ವೇಗಕ್ಕಂತು ಕಡಿವಾಣ ಇಲ್ಲದೆ ಸಂಚರಿಸುವಂತ್ತಾಗಿದೆ ಹೀಗಿರುವಾಗ ಅಲ್ಲಿನ ಸ್ಥಳೀಯರು,ಶಾಲಾ ಮಕ್ಕಳು ರಸ್ತೆಯಲ್ಲೆ ನಿಂತು ಬಸ್ ಏರುವ ಸ್ಥಿತಿ ಮುಂದಿನ ದಿನಗಳಲ್ಲಿ ಅಪಾಯಕ್ಕೆ ತಂದೊಡ್ಡುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಈ ಬಗ್ಗೆ ಸ್ಥಳೀಯರು, ಸ್ಥಳೀಯ ಸಂಘಸಂಸ್ಥೆಗಳ ಹಾಗೂ ಜನಪ್ರತಿನಿಧಿಗಳಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕಾಗಿ ಮೊರೆಹೋಗಿದ್ದಾರೆ
ಈ ಪರಿಸರದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯ ಜನರು ಬಸ್ ಏರಲು ರಸ್ತೆಯಲ್ಲೆ ನಿಲ್ಲಬೇಕಾದ ಸ್ಥಿತಿ ಇದೆ ಒಂದೆಡೆ ಬಿಸಿಲಿನ ನಿಲ್ಲಬೆಕಾದ ಸ್ಥಿತಿಯಾದರೆ ಇನ್ನೊಂದೆಡೆ ರಭಸದಿಂದ ಬರುವ ಘನ ವಾಹನಗಳು ಭಾರಿ ಗಾತ್ರದ ಲಾರಿಗಳು ಚಲಿಸುವ ಹಿನ್ನಲ್ಲೆಯಲ್ಲಿ ಅಪಾಯತಂದೊಡ್ಡುವ ಸ್ಥಿತಿ ಎದುರಗಿದೆ ಈ ಹಿನ್ನಲ್ಲೆಯಲ್ಲಿ ಫಲಕಯುಕ್ತ ಬಸ್ ತಂಗುದಾಣ ಶೀಘ್ರದಲ್ಲಿ ನಿರ್ಮಿಸಲು ಆಗ್ರಹಿಸುತ್ತಿದ್ದೇನೆ.
ಶ್ರೀನಿವಾಸ ಮಲ್ಯಾಡಿ ಸ್ಥಳೀಯ ನಿವಾಸಿ, ಮುಖಂಡರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆ










