ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಸ್ತಾನದ ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವ ದೇವಸ್ಥಾನ ಇಲ್ಲಿ ವಿಶ್ವರೂಪ ದರ್ಶನ ಕಾರ್ಯಕ್ರಮ ಭಾನುವಾರ ಮುಸುಕಿನ ಜಾವದಲ್ಲಿ ಸಂಪನ್ನಗೊಂಡಿತು.
ಶ್ರೀ ದೇವಳದಲ್ಲಿ ಭಕ್ತಾಧಿಗಳ ಸಮ್ಮುಖದಲ್ಲಿ ಹಣತೆಯನ್ನಿಟ್ಟು ದೀಪ ಪ್ರಜ್ವಲಿಸಿ ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ವೇ.ಮೂ.ಮೊಹನ್ ಶಾಸ್ತ್ರಿ,ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೆರಿಸಲಾಯಿತು.
ದೇವಳದ ಅಧ್ಯಕ್ಷ ಪ್ರಕಾಶ್ ಹೊಳ್ಳ, ದೇವಳದ ಟ್ರಸ್ಟಿಗಳಾದ ಮಂಜುಳಾ ಚಂದ್ರಶೇಖರ ಉಪಾಧ್ಯ, ಶ್ರೀ ದೇವಳದ ಕೋಶಾಧಿಕಾರಿ ಶ್ರೀಧರ ಶಾಸ್ತ್ರಿ, ಅರ್ಚಕರಾದ ಅನಂತರಾಮ ಬಾಯರಿ,ಚಂದ್ರಶೇಖರ ಶಾಸ್ತ್ರಿ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಟ್ರಸ್ಟಿ ವೇ.ಮೂ.ಚಂದ್ರಶೇಖರ ಉಪಾಧ್ಯ,ದೀಪಣೊತ್ಸವ ಸೇವಾಕರ್ತರಾದ ಜಲಜಾಕ್ಷಿ ಹೊಳ್ಳ,ದೇವಳದ ತಂತ್ರಿಗಳಾದ ಬಲರಾಮ ಸೋಮಯಾಜಿ, ರಥಬೀದಿ ಗೆಳೆಯರಾದ ಸುಧೀಂದ್ರ ಕಾರಂತ್ ಮತ್ತಿತರರು ಉಪಸ್ಥಿತರಿದ್ದರು.











