ಕುಂದಾಪುರ: ಫೆ. 17ರಿಂದ ಮತ್ಸ್ಯ ಗಂಧ ಎಕ್ಸ್ ಪ್ರೆಸ್ ರೈಲಿಗೆ LHB ಬೋಗಿಗಳ ಜೋಡಣೆ – ಕರಾವಳಿಗರ ದಶಕಗಳ ಬೇಡಿಕೆ ಈಡೇರಿಕೆ

0
2164

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಸುರಕ್ಷಿತ ಮತ್ತು ಆರಾಮದಾಯಕ ರೈಲು ಪ್ರಯಾಣಕ್ಕೆ ಅಗತ್ಯವಾದ LHB ಬೋಗಿಗಳನ್ನು ಮತ್ಸ್ಯ ಗಂಧ ಎಕ್ಸ್ ಪ್ರೆಸ್ ರೈಲಿಗೆ ಫೆಬ್ರವರಿ 17ನೇ ತಾರೀಕಿನಿಂದ ಜೋಡಿಸಲಾಗುತ್ತಿದ್ದು, ಕರಾವಳಿಗರ ದಶಕಗಳ ಬೇಡಿಕೆ ಈಡೇರಿದಂತಾಗಿದೆ.

ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಾಗು ಜನಪ್ರತಿನಿಧಿಗಳ ಮೂಲಕ ಸಾರ್ವಜನಿಜರು ನಿರಂತರವಾಗಿ ಮತ್ಸಗಂಧ ಹಳೆಯ ಬೋಗಿಯ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಿದರೂ ಇಪ್ಪತ್ತು 25 ವರ್ಷಗಳಷ್ಟು ಹಳೆಯ ಬೋಗಿಗಳಲ್ಲೇ ಮತ್ಸಗಂಧ ರೈಲು ಓಡುತ್ತಿರುವ ಬಗ್ಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರ ಗಮನಕ್ಕೆ ಕಳೆದ ಜುಲೈನಲ್ಲಿ ತಂದಿತ್ತು.

ಕಳೆದ ಜುಲೈನಲ್ಲಿ ರೈಲ್ವೇ ಸಚಿವರನ್ನು ಭೇಟಿಯಾಗಿದ್ದ ಸಂಸದ ಶ್ರೀನಿವಾಸ್ ಪೂಜಾರಿಯವರು ರೈಲ್ವೇ ಸಚಿವರಿಗೆ ಮತ್ಸಗಂಧಾ ರೈಲಿನ ಮಹತ್ವ ಮತ್ತು LHB ಕೋಚ್ ಅಗತ್ಯಗಳನ್ನು ಮನವರಿಕೆ ಮಾಡಿಕೊಟ್ಟು LHB ಬೋಗಿಗಳ ಜೋಡಣೆಗೆ ದಕ್ಷಿಣ ರೈಲ್ವೆಗೆ ಸೂಚನೆ ಕೊಡಿಸಿದ್ದಲ್ಲದೇ ಈ ಪ್ರಕ್ರಿಯೆಗೆ ನಿರಂತರ ಪತ್ರ ವ್ಯವಹಾರವನ್ನೂ ಮಾಡಿದ್ದರು.

Click Here

ಸಂಸದರ ಕಾರ್ಯಗಳಿಗೆ ಪೂರಕವಾಗಿ ವಿವಿಧ ರೈಲು ಹೋರಾಟಗಾರರು, ವ್ಲಾಗರ್ ಗಳು ವಿಡಿಯೋ, ಈ ಮೈಲ್ ಮೂಲಕ ರೈಲ್ವೆಗೆ ಒತ್ತಡ ಹಾಕಿದ್ದರು.

ಈ ಹಿನ್ನೆಲೆಯಲ್ಲಿ, ದಕ್ಷಿಣ ರೈಲ್ವೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಮತ್ಸ್ಯ ಗಂಧ ರೈಲಿಗೆ ಆಧುನಿಕ ಹೊಸ LHB ಬೋಗಿಗಳನ್ನು, 120 ದಿನದ ಮುಂಗಡ ಟಿಕೇಟ್ ಬುಕ್ಕಿಂಗ್ ಆಗಿರುವ ಅವಧಿ ಕಳೆದು ಪೆಬ್ರವರಿ 17 ರಿಂದ ಜೋಡಿಸುವುದಾಗಿ ಪ್ರಕಟಿಸಿದೆ.

ಇದಕ್ಕೆ ಕಾರಣರಾದ ಸಂಸದ ಶ್ರೀನಿವಾಸ್ ಪೂಜಾರಿಯವರಿಗೆ, ವಿವಿಧ ರೈಲು ಹೋರಾಟಗಾರರಿಗೆ ಹಾಗೂ ಸಾಮಾಜಿಕ ಜಾಲತಾಣದ ಸಕ್ರಿಯರಿಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಧನ್ಯವಾದಗಳನ್ನು ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here