ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಉತ್ತರ ಕನ್ನಡ ಕರಾಟೆ ಅಸೋಸಿಯೇಷನ್ ಭಟ್ಕಳ ಇವರು ಆಯೋಜಿಸಿದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟದ ಕುಮಿಟೆ ವಿಭಾಗದಲ್ಲಿ ಆರ್ಯನ್ (8ನೇ ತರಗತಿ), ರಜತ್ (7ನೇ ತರಗತಿ) ಚಿನ್ನದ ಪದಕ ಹಾಗೂ ಗಗನ್ ( 6ನೇ ತರಗತಿ) ಕಂಚಿನ ಪದಕವನ್ನು ಗಳಿಸಿರುತ್ತಾರೆ.
ಕಟಾ ವಿಭಾಗದಲ್ಲಿ ಗಗನ್ (6ನೇ ತರಗತಿ) ಚಿನ್ನದ ಪದಕ, ಅಕ್ಷಿತ್ (7ನೇ ತರಗತಿ), ಅನ್ವೇಷಣ(7ನೇ ತರಗತಿ) ಶ್ರೀಶಾ (4ನೇ ತರಗತಿ) , ರಜತ್ (7ನೇ ತರಗತಿ) ಬೆಳ್ಳಿಯ ಪದಕ ಹಾಗೂ ಆರ್ಯನ್ (8ನೇ ತರಗತಿ) ಕಂಚಿನ ಪದಕವನ್ನು ಗಳಿಸಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ , ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.











