ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಲಯನ್ಸ್ ಕ್ಲಬ್ ಹಂಗಳೂರು ಅಧ್ಯಕ್ಷ ಲಯನ್ ರೋವನ್ ಡಿ’ಕೋಸ್ತ ಮತ್ತು ಸದಸ್ಯರು ಕುಂದಾಪುರದ ಚೈತನ್ಯ ಸ್ಪೆಷಲ್ ಸ್ಕೂಲ್ ಗೆ ಮಧ್ಯಾಹ್ನ ಭೇಟಿ ನೀಡಿ, ಮಕ್ಕಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯ ಮಾಡಿದರು.
ಲಯನ್ ಸಂಗೀತ ಆರ್. ಶೆಟ್ಟಿ ಈ ಭೋಜನದ ಅತಿಥೇಯರಾಗಿದ್ದರು.
ಜಿಲ್ಲಾ ದ್ವಿತೀಯ ಉಪ ಜಿಲ್ಲಾ ಗವರ್ನರ್ ಲಯನ್ ರಾಜೀವ ಕೋಟ್ಯಾನ್ ಆಗಮಿಸಿದ್ದು ಶಾಲೆಯ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಕ್ಲಬ್ ಮತ್ತಷ್ಟು ಸೇವಾಕರ್ಯ ಮಾಡಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಲಿ ಎಂದು ಹಾರೈಸಿದರು.
ವಲಯಾಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿ ಲಯನ್ ಮ್ಯಾಥ್ಯೂ ಜೋಸೆಫ್, ಲಯನ್ ಸದಸ್ಯರು ಉಪಸ್ಥಿತರಿದ್ದರು.
ಅಧ್ಯಕ್ಷರು ಈ ಸಂಸ್ಥೆ ಯ ಕಾರ್ಯ ವೈಖರಿ ಮೆಚ್ಚಿ ಸೂಕ್ತ ನೆರವು ನೀಡುವುದಾಗಿ ತಿಳಿಸಿದರು. ಸಂಸ್ಥೆಯ ಮುಖ್ಯ ಶಿಕ್ಷಕಿ ಸ್ವಾಗತಿಸಿ, ವಂದಿಸಿದರು.
.











