ಅಂಪಾರು :ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೀಪಾವಳಿ ಆಚರಣೆ

0
243

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸಂಜಯಗಾಂಧಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅಂಪಾರು ಇಲ್ಲಿ ಅ.30ರಂದು ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ, ಅದ್ದೂರಿಯಾಗಿ ಆಚರಿಸಲಾಯಿತು.

ಸ್ಥಳೀಯ ಪೋಷಕರು, ಪ್ರಗತಿಪರ ಕೃಷಿಕರಾದ ಕೇಶವ ಕಿಣಿ ಇವರು ಮತ್ತು ಅವರ ಸ್ನೇಹಿತರು ಅಗತ್ಯ ಪರಿಕರಗಳೊಂದಿಗೆ ಶಾಲೆಗೆ ಆಗಮಿಸಿ, ದೀಪಾವಳಿ ಹಬ್ಬದ ಅರ್ಥ, ಆಚರಣೆಯ ಹಂತ ಹಾಗೂ ಪದ್ಧತಿಗಳನ್ನು ತಿಳಿಸಿ, ಪ್ರಾತ್ಯಕ್ಷಿಕೆ ಮೂಲಕ ಮಕ್ಕಳೊಂದಿಗೆ ಹಬ್ಬವನ್ನು ಆಚರಿಸಿದರು. 5 ಬಗೆಯ ಎಲೆಗಳನ್ನು, ಗದ್ದೆಯಲ್ಲಿ ಸುಲಭವಾಗಿ ದೊರೆಯುವ ಹೂವುಗಳನ್ನು ಬಳಸಿ, ಅರಿಶಿನ ಎಲೆಯ ಕಡುಬು ಇವುಗಳನ್ನು ಭೂದೇವಿ ಗೆ ನೈವೇದ್ಯ ರೂಪದಲ್ಲಿ ಅರ್ಪಣೆ ಮಾಡಿ, ಬಲೀಂದ್ರನನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಕೂಗಿ ಕರೆಯುವುದನ್ನು ಹಿರಿಯ ಕೃಷಿಕ ಜಗನ್ನಾಥ ಶೆಟ್ಟಿ ಇವರು ತೋರಿಸಿದರು.

ಮುಖ್ಯ ಅತಿಥಿಗಳಾಗಿ ನೂತನ ಶೆಟ್ಟಿ ಇವರು ಆಗಮಿಸಿ ಆಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

Click Here

ಸಂಸ್ಥೆಯ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಇವರು ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು ಮತ್ತು ಹಬ್ಬದ ಕುರಿತು ಪೌರಾಣಿಕ ಹಿನ್ನೆಲೆಯನ್ನು ಕಥೆಯ ಮೂಲಕ ತಿಳಿಸಿದರು.

ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಇವರು ಶುಭ‌ಹಾರೈಸಿದರು. ಟ್ರಸ್ಟ್ ನ ನಿರ್ದೇಶಕರು ಉಪಸ್ಥಿತರಿದ್ದರು.

ಮಕ್ಕಳಿಗೆ ಹಬ್ಬದ ವಿಶೇಷ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಹಬ್ಬದ ಆಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಗೂಡುದೀಪ ತಯಾರಿ ಮತ್ತು ಪ್ರದರ್ಶನ ಮತ್ತು ಅಲಂಕಾರಿಕ, ಆಕರ್ಷಕ ಹಣತೆಗಳ ಪ್ರದರ್ಶನ ವನ್ನೂ ಏರ್ಪಡಿಸಲಾಗಿತ್ತು. ಇದರಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಸಂಪೂರ್ಣವಾಗಿ ತೊಡಗಿಸಿಕೊಂಡು ಸುಮಾರು 200 ರಷ್ಟು ಗೂಡುದೀಪಗಳನ್ನು ಮಾಡಿ, ಪ್ರದರ್ಶನ ಮಾಡಿದರು. ಪೋಷಕರ ಸಹಕಾರ, ಪ್ರೋತ್ಸಾಹ ಈ ನಿಟ್ಟಿನಲ್ಲಿ ಅಭಿನಂದನೀಯ ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದರು.

ಈ ಗೂಡುದೀಪ ಪ್ರದರ್ಶನ ಸ್ಪರ್ಧೆಯ ತೀರ್ಪುಗಾರರಾಗಿ ರೊಟೇರಿಯನ್ ಗುರುರಾಜ್ ಶೆಟ್ಟಿ, ಶ್ರೀದೇವಿ ಶಾಮಿಯಾನ ಅಂಪಾರು, ರಾಘವೇಂದ್ರ ಬಳೆಗಾರ, ಛಾಯಾ ಫ್ಯಾನ್ಸಿ ಸ್ಟೋರ್ ಅಂಪಾರು, ಮತ್ತು ನಿರ್ದೇಶಕರಾದ ಸುಭಾಶ್ಚಂದ್ರ ಶೆಟ್ಟಿ ಕೊಡ್ಲಾಡಿ ಇವರು ಆಗಮಿಸಿ, ಮಕ್ಕಳ ಕ್ರಿಯಾಶೀಲತೆ ಶ್ಲಾಘನೀಯ, ಇಂತಹ ಉತ್ತಮ ಕಾರ್ಯಕ್ರಮಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದು ತಿಳಿಸಿದರು

Click Here

LEAVE A REPLY

Please enter your comment!
Please enter your name here