ಬೈಂದೂರು: ಸಮಗ್ರ ಅಭಿವೃದ್ಧಿಗೆ ಬೈಂದೂರು ಉತ್ಸವ ಮುನ್ನುಡಿ ಬರೆದಿದೆ – ಸಂಸದ ಬಿ. ವೈ. ರಾಘವೇಂದ್ರ

0
378

Click Here

Click Here

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಬೈಂದೂರು ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಊರಿನ ಸಮಗ್ರ ಅಭಿವೃದ್ಧಿಗೆ ಬೈಂದೂರು ಉತ್ಸವ ಮುನ್ನುಡಿ ಬರೆದಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಅವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಗಾಂಧಿ ಮೈದಾನದಲ್ಲಿ ಬೈಂದೂರು ಉತ್ಸವ – ಸಂಭ್ರಮದ ಗೆಜ್ಜೆ, ಸಮೃದ್ಧಿಗೆ ಹೆಜ್ಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಹಾಗೂ ಮಲೆನಾಡು ಪ್ರದೇಶವನ್ನು ಒಳಗೊಂಡಿರುವ ಬೈಂದೂರಿಗೆ ಸಂಪರ್ಕ ಕಲ್ಪಿಸುವ ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಕಳೆದ 10 ವರ್ಷದೀಚೆಗೆ ಅಭಿವೃದ್ಧಿಪಡಿಸುವ ಕೆಲಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಬೈಂದೂರನ್ನು ಪ್ರಮುಖ ಪ್ರವಾಸಿ ತಾಣವಾಗಿ ಹಾಗೂ ಆರಾಧನಾ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಅವರು ಬೈಂದೂರು ಉತ್ಸವಕ್ಕೆ ರಾಜ್ಯ ಸರಕಾರ ಕೂಡ ಅನುದಾನ ಬಿಡುಗಡೆ ಮಾಡಿ ಪ್ರೋತ್ಸಾಹಿಸಿದೆ ಎಂದರು.

Click Here

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ರಾಜ್ಯೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಬೈಂದೂರಿನಲ್ಲಿ ಅದ್ಧೂರಿ ಉತ್ಸವ ಸಂಘಟಿಸುವ ಮೂಲಕ ಅರ್ಕ್ಲ್ ಹೂಡುವ ಕೆಲಸವಾಗಿದೆ. ನಾಲ್ಕೈದು ಬಾರಿ ಉಳುಮೆ ಮಾಡಿದ ಬಳಿಕ ಗದ್ದೆ ನಾಟಿ ಮಾಡಲು ಅನುಕೂಲವಾಗುವ ಹಾಗೆ, ನಾಲ್ಕೈದು ಬಾರಿ ಬೈಂದೂರಿನಲ್ಲಿ ಉತ್ಸವ ಆದ ಬಳಿಕ ಇದಕ್ಕೊಂದು ಸ್ಪಷ್ಟ ಚಿತ್ರಣ ದೊರೆಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಕುಂದಾಪುರ ಶಾಸಕ ಎ. ಕಿರಣ್‌ಕುಮಾರ್ ಕೊಡ್ಗಿ, ಉದ್ಯಮಿ ನಿತಿನ್ ನಾರಾಯಣ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ, ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ ಶೆಟ್ಟಿ, ಕುಂದಾಪುರ ಉಪವಿಭಾಗಾಕಾರಿ ಮಹೇಶ್ಚಂದ್ರ, ಬೈಂದೂರು ತಹಶೀಲ್ದಾರ ಪ್ರದೀಪ್, ಬೈಂದೂರು ತಾ.ಪಂ. ಕಾರ್ಯನಿರ್ವಹಣಾಕಾರಿ ಭಾರತಿ, ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಕಾರಿ ಅಜಯ್ ಭಂಡಾರರ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ವಲಯ ಅರಣ್ಯಾಕಾರಿ ಸಂದೇಶ್, ಜಯಾನಂದ ಹೋಬಳಿದಾರ್, ಡಾ. ಅತುಲ್‌ಕುಮಾರ ಶೆಟ್ಟಿ, ಕೃಷ್ಣಪ್ರಸಾದ ಅಡ್ಯಂತಾಯ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಕುಂದಾಪುರ ತಾಲೂಕು ಆರೋಗ್ಯಾಕಾರಿ ಡಾ. ಪ್ರೇಮಾನಂದ, ರಾಜೇಶ್ ಕಾವೇರಿ, ಸದಾನಂದ ಉಪ್ಪಿನಕುದ್ರು, ಉತ್ಸವದ ಸಹಸಂಚಾಲಕ ಶ್ರೀಗಣೇಶ್ ಉಪ್ಪುಂದ, ಕರಣ್ ಪೂಜಾರಿ, ಪುಷ್ಪರಾಜ ಶೆಟ್ಟಿ, ಸುರೇಶ ಬಟ್ವಾಡಿ ಮತ್ತಿತರರು ಉಪಸ್ಥಿತರಿದ್ದರು.

ಶಾಸಕ ಗುರುರಾಜ ಗಂಟಿಹೊಳೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಬೈಂದೂರು ಸಮೃದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ ಶೆಟ್ಟಿ ಸ್ವಾಗತಿಸಿ, ಅರುಣಕುಮಾರ ಶಿರೂರು, ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು.

ಕೃತಕ ಅರಣ್ಯ ಲೋಕ : ಬೈಂದೂರು ಉತ್ಸವದ ವಿಶೇಷತೆ ಎಂಬಂತೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವತಿಯಿಂದ ಬೈಂದೂರಿನ ಗಾಂಧಿ ಮೈದಾನದ ಪಕ್ಕದಲ್ಲಿ ಕೃತಕ ಅರಣ್ಯ ಲೋಕವನ್ನು ಸೃಷ್ಟಿಸಲಾಗಿತ್ತು ಇಲ್ಲಿ ನಿರ್ಮಿಸಿದ ಜಾಂಬೂರಿ ಕುಂಬ್ರಿಕಾನು ಎಂಬ ಅರಣ್ಯ ಲೋಕದಲ್ಲಿ ಗ್ರಾಮೀಣ ಹಳ್ಳಿ ಕೃಷಿಗದ್ದೆಗಳು ಕಾಡು ಪರ್ವತ ನಾಗಬನ ವಿವಿಧ ರೀತಿಯ ಪ್ರಾಣಿ ಸಂಕುಲ ಪಕ್ಷಿ ಸಂಕುಲಗಳು ಜಲ ತೊರೆಗಳನ್ನು ಅಲ್ಲದೆ ಕಡಲಮೆ ಅರಿವು ಸ್ಥಬ್ಧ ಚಿತ್ರಗಳು ವೀಕ್ಷಕರನ್ನು ಆಕರ್ಷಣೆ ಗೊಳಿಸಿತು ಅಲ್ಲದೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಇಲ್ಲಿನ ಕೃತಕ ಅರಣ್ಯ ಲೋಕ ಸಾರುತಿತ್ತು

Click Here

LEAVE A REPLY

Please enter your comment!
Please enter your name here