ಕೋಟ: ಗಾಂಧಿ ವಿಚಾರ ಮಾಲಿಕೆ ಆರಂಭ

0
701

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಮಹಾತ್ಮಾಗಾಂಧೀಜೀಯವರ ವಿಚಾರಗಳು ನಮಗೆ ಅನುಕರಣೀಯ. ಅವರ ಜೀವನವೇ ದಾರಿದೀಪ. ಅವರು ನೀಡಿದ ಕೊಡುಗೆಗಳ ಮೂಲಕ ಭವ್ಯಭಾರತ ನಿರ್ಮಿಸಬಹುದು ಎಂದು ವಿದ್ಯಾರ್ಥಿ ಕುಮಾರಿ ಅನ್ವಿತ ನುಡಿದಳು.

ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ ಆರಂಭಿಸಿದ ಗಾಂಧಿ ವಿಚಾರ ಮಾಲಿಕೆ ಸರಣಿ ಕಾರ್ಯಕ್ರಮದಲ್ಲಿ ಅವಳು ಮಾತನಾಡುತ್ತಿದ್ದಳು. ಶಾಲಾ ಮುಖ್ಯೋಪಾಧ್ಯಾಯ ಜಗದೀಶ ಹೊಳ್ಳ ಗಾಂಧೀಜಿ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮದ ಅಗತ್ಯತೆಯನ್ನು ವಿವರಿಸಿದರು. ಶಾಲಾ ನಾಯಕಿ ಕುಮಾರಿ ಮಾನ್ಯ, ಉಪನಾಯಕಿ ಪ್ರಣತಿ ಉಪಾಧ್ಯ, ಕಾರ್ಯಕ್ರಮ ಸಂಘಟಕಿ ಸುಮಂಗಲ ಉಪಸ್ಥಿತರಿದ್ದರು.

Click Here

ಹಿರಿಯ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸದರು.

Click Here

LEAVE A REPLY

Please enter your comment!
Please enter your name here