ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನ ಹರ್ತಟ್ಟು ಕೋಟ ಇದರ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಭಾನುವಾರ ಸಂಪನ್ನಗೊಂಡಿತು.

ದೇವಳದ ಒಳ ಸುತ್ತ ಪ್ರಾಂಗಣದಲ್ಲಿ ಭಕ್ತಾಧಿಗಳು ಹಣತೆ ದೀಪ ಹಚ್ಚುವ ಮೂಲಕ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದೇವಳದ ಅರ್ಚಕ ಪ್ರತಿನಿಧಿ ಸುಧೀಂದ್ರ ಐತಾಳ್ ಧಾರ್ಮಿಕ ಕಾರ್ಯಗಳನ್ನು ನೆರವೆಸಿದರು.
ಪೂಜಾ ಕೈಂಕರ್ಯದ ನಂತರ ಭಕ್ತಾಧಿಗಳಿಗೆ ಫಲಹಾರದ ವ್ಯವಸ್ಥೆ ಕಲ್ಪಿಸಲಾಯಿತು.
ವಿಶೇಷವಾಗಿ ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರಿಂದ ಭಜನಾ ಕಾರ್ಯಕ್ರಮ ನೆರವೆರಿತು. ಅಲ್ಲದೆ ದೇವಳದ ವತಿಯಿಂದ ಭಜನಾ ತಂಡಕ್ಕೆ ಕೃತಜ್ಞತೆ ಸಲ್ಲಿಸಿ ಗೌರವಿಸಲಾಯಿತು.
ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಕಾರ್ಯದರ್ಶಿ ಹರೀಷ್ ದೇವಾಡಿಗ,ಸಮಿತಿಯ ಪ್ರಮುಖರಾದ ನಾಗರಾಜ್ ಗಾಣಿಗ,ಪ್ರಶಾಂತ್ ದೇವಾಡಿಗ,ಪ್ರದೀಪ್ ದೇವಾಡಿಗ,ಸಿದ್ಧ ದೇವಾಡಿಗ,ಭಜನಾ ತಂಡದ ವನೀತಾ ಉಪಾಧ್ಯಾ ಮತ್ತಿತರರು ಉಪಸ್ಥಿತರಿದ್ದರು.











