ಭಾರತೀಯರ ಗೋ ಆರಾಧನೆ ಶ್ರೇಷ್ಠವಾದದ್ದು – ಲೀಯಾಖಾತ್ ಆಲಿ

ಕುಂದಾಪುರ ಮಿರರ್ ಸುದ್ದಿ…
ಕೋಟ: ಗೋವುಗಳಿಗೆ ಭಾರತದಲ್ಲಿ ಮಹತ್ವವಾದ ಸ್ಥಾನ ಹಾಗೂ ಆರಾಧನೆ ನಡೆಯುತ್ತದೆ ಎಂದು ರೋಟರಿ ಕ್ಲಬ್ ಕುಂದಾಪುರ ಇದರ ಅಧ್ಯಕ್ಷ ಲಿಯಾಖಾತ್ ಆಲಿ ಹೇಳಿದರು.
ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮೂಡುಗೋಪಾಡಿ ರಫೀಕ್ ಸಾಹೇಬರ ಹೈನುಗಾರಿಕಾ ಫಾರ್ಮನಲ್ಲಿ ಹಮ್ಮಿಕೊಂಡ ಸಾಮೂಹಿಕ ಗೋ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ ಭಾರತೀಯ ಸಂಸ್ಕೃತಿ ವಿಶಿಷ್ಠವಾದದ್ದು ಇಲ್ಲಿ ಎಲ್ಲಾ ವರ್ಗದವರು ಗೋವುಗಳನ್ನು ಪೂಜಿಸುವ ಕ್ರಮಗಳಿಗೆ ಈ ದಿಸೆಯಲ್ಲಿ ಪಂಚವರ್ಣ ಸಂಸ್ಥೆ ಸಾಮರಸ್ಯ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಒಂದು ಸಂಘಟನೆ ಈ ರೀತಿಯಲ್ಲೂ ಕಾರ್ಯನಿರ್ವಹಿಸಬಹುದು ಎಂದು ಜಗತ್ತಿಗೆ ತೋರಿಸಲ್ಪಟ್ಟಿದೆ ಎಂದರು.
ಮುಖ್ಯ ಅಭ್ಯಾತರಾಗಿ ಗೋ ಪೂಜೆಯನ್ನು ಉದ್ಘಾಟಿಸಿದ ಬಿಜೆಪಿ ಕುಂದಾಪುರ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಮಾತನಾಡಿ ಗೋ ಮಾತೆ ಪೂಜೆ ವರ್ಷಕ್ಕೆ ಸಿಮಿತವಾಗದೆ ವರ್ಷಂಪ್ರತಿ ಇದರ ಆರಾಧನೆ ನಡೆಯುವಂತ್ತಾಗಲಿ ಸಮಾಜಮುಖಿ ಚಿಂತನೆಗಳೊಂದಿಗೆ ಪರಿಸರ ಜಾಗೃತಿಯ ದಾಖಲೆ ನಿರ್ಮಿಸುವ ಪಂಚವರ್ಣ ಸಂಸ್ಥೆಯ ಕಾರ್ಯ ಪ್ರತಿಯೊಂದು ಸಂಘಟನೆಗಳಿಗೆ ಮಾದರಿಯಾಗಿದೆ ಅಭಿಮತ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಂಚವರ್ಣ ಮಹಿಳಾ ಮಂಡಲದ ಮಹಿಳೆಯರು ಗೋ ಮಾತೆಗೆ ಪೂಜೆ ನೆರವೆರಿಸಿದರು.
ಹೈನುಗಾರಿಕೆಯ ಪಾರ್ಮ ಮುಖ್ಯಸ್ಥ ರಫೀಕ್ ಸಾಹೇಬ್ ಗೋವಿನ ಹೆಸರಿನೊಂದಿಗೆ ಗಿಡ ನಡುವ ಮೂಲಕ ಪರಿಸರ ಜಾಗೃತಿ ಮೆರೆದರು.
ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.
ಈ ಸಂದರ್ಭದಲ್ಲಿ ವಿಪ್ರ ಮಹಿಳಾ ವೇದಿಕೆಯ ಅಧ್ಯಕ್ಷೆ ವನಿತಾ ಉಪಾಧ್ಯ, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಜೆಸಿಐ ಸಿನಿಯರ್ ಲಿಜನ್ ಅಧ್ಯಕ್ಷ ಕೇಶವ ಆಚಾರ್ ಕೋಟ,ಫಾರ್ಮನ ಪ್ರಮುಖರಾದ ಹನೀಫ್ ಸಾಹೇಬ್ ಮತ್ತಿತರರು ಇದ್ದರು.
ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ಪುಷ್ಭಾ ಕೆ.ಹಂದಟ್ಟು ಪ್ರಾಸ್ತಾವನೆ ಸಲ್ಲಿಸಿದರು. ಪಂಚವರ್ಣ ಯುವಕ ಮಂಡಲದ ಸದಸ್ಯ ಕಾರ್ತಿಕ್ ಎನ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ವಂದಿಸಿದರು.











