ಕುಂದಾಪುರ ನಗರ ಪ್ರಾಧಿಕಾರಧ ಅಧ್ಯಕ್ಷರಾಗಿ ವಿನೋದ್ ಕ್ರಾಸ್ಟೊ ನೇಮಕ

0
211

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ನಗರ ಯೋಜನಾ ಪ್ರಾಧಿಕಾರ ಇದರ ಅಧ್ಯಕ್ಷರಾಗಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಅವರು ನೇಮಕಗೊಂಡಿದ್ದಾರೆ.

ಬಿ.ಇ ಪದವೀದರರಾಗಿರುವ ಇವರು ನಗರ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಇವರ ತಂದೆ ಎಡ್ವಿನ್ ಕ್ರಾಸ್ಟೊ ಇವರು 1975ರಲ್ಲಿ ಪೌರಸಮಿತಿ ರಚಿಸಿ ಪುರಸಭೆಗೆ ಸ್ಪರ್ಧಿಸಿ ಒಂದು ಅವಧಿಗೆ ಅಧ್ಯಕ್ಷರಾಗಿದ್ದರು. ಇವರ ತಾಯಿ ಶ್ರೀಮತಿ ಲೇನಿ ಕ್ರಾಸ್ಟೊ ಇವರು ಕೂಡ ಪುರಸಭಾ ಉಪಾಧ್ಯಕ್ಷೆಯಾಗಿ ಒಂದು ಅವಧಿಗೆ ಕಾರ್ಯನಿರ್ವಹಿಸಿದ್ದರು.

Click Here

ಪ್ರಸ್ತುತ ಶೆವಟ್ ಪ್ರತಿಷ್ಠಾನ್ ಟ್ರಸ್ಟಿನ ಅಧ್ಯಕ್ಷ, ರೋಸರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಕಥೋಲಿಕ್ ಸಭಾ ವಲಯ ಸಮಿತಿಯ ಮಾಜಿ ಅಧ್ಯಕ್ಷ, ಕ್ರಾಸ್ಟೊ ಇಂಜಿನಿಯರಿಂಗ್ ವರ್ಕ್ಸ್ ಮಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Click Here

LEAVE A REPLY

Please enter your comment!
Please enter your name here