ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಳಾವರ ಶತಮಾನೋತ್ಸವದ ಪೂರೈಸಿದ ಶಾಲೆಯಾಗಿದ್ದು ಶಾಲೆಯ ಆಸ್ತಿ ಪರಬಾರೆ ಆಗುತ್ತಿರುವುದನ್ನು ವಿರೋಧಿಸಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕಾಳಾವರ ಪಂಚಾಯತ್ ಎದುರು ಧರಣಿ ಸತ್ಯಾಗೃಹ ನಡೆಯಿತು.
ಕಾಳಾವರ ಗ್ರಾಮದ ಸರ್ವೇ ನಂಬರ್ ೨೦೩/೨ರಲ್ಲಿರುವ ೦.೬೭ ಎಕ್ರೆ ಜಮೀನು ಮೂಲತಃ ದಾನಿಯೊಬ್ಬರಿಗೆ ಸೇರಿದ್ದಾಗಿದ್ದು ಅವರು ೧೯೫೪ ಜೂನ್ ೨೧ರಂದು ದಾನಪತ್ರದ ಮೂಲಕ ಈ ಕಾಲದ ಸರಕಾರಿ ಶಾಲೆಗಳ ಉಸ್ತುವಾರಿ ಅಧಿಕಾರಿ ಡಿಸ್ಟಿçಕ್ಟ್ ಬೋರ್ಡ್ ಪ್ರೆಸಿಡೆಂಟ್ ಅವರಿಗೆ ನೀಡಿದ್ದರು. ಈ ದಾನಪತ್ರವು ಕುಂದಾಪುರ ತಾಲೂಕು ಸಬ್ ರಿಜಿಸ್ಟಾçರ್ ಆಫೀಸಿನಲ್ಲಿ ನೋಂದಣಿಯಾಗಿದೆ. ಆ ದಿನದಿಂದ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಸ್ತಿಯಾಗಿದ್ದು ಇದರ ಪಹಣಿಯಲ್ಲಿ ಡಿಸ್ಟಿçಕ್ಟ್ ಬೋರ್ಡ್ ಪ್ರೆಸಿಡೆಂಟ್ ಎಂದು ನಮೂದಾಗಿದೆ. ಈ ಸ್ಥಳದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಳಾವರ ೧೦೩ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಕಳೆದ ವರ್ಷವಷ್ಟೇ ಶತಮಾನೋತ್ಸವ ಆಚರಿಸಿಕೊಂಡಿದೆ. ಈ ಜಮೀನಿನಲ್ಲಿ ಶಿಕ್ಷಣ ಇಲಾಖೆಯಿಂದ ಹಾಗೂ ದಾನಿಗಳಿಂದ ಕೋಟ್ಯಾಂತರ ರೂಪಾಯಿಗಳ ಕಟ್ಟಡ ಹಾಗೂ ಇತರ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಶಾಲಾ ಕಡತದಲ್ಲಿ ದಾನಪತ್ರವು ಲಭ್ಯವಿಲ್ಲದ ಕಾರಣ ಇದೇ ನ್ಯೂನ್ಯತೆಯನ್ನು ಬಳಿಸಿಕೊಂಡು ನೂರಾರು ವರ್ಷಗಳಿಂದ ಸುಮ್ಮನಿದ್ದ ವ್ಯಕ್ತಿಯೊಬ್ಬರು ಕುಂದಾಪುರದ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ತಮಗೆ ಸೇರಿದ ಜಾಗವೆಂದು ದಾವೆ ಹೂಡಿ ತಮ್ಮ ಪರವಾಗಿ ತೀರ್ಪು ಪಡೆದಿರುತ್ತಾರೆ. ಮಾತ್ರವಲ್ಲದೆ ಈ ಆಸ್ತಿಯ ಪಹಣಿಯನ್ನು ತಮ್ಮ ಹೆಸರಿಗೆ ಬದಲಾಯಿಸುವಂತೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇದೀಗ ಕುಂದಾಪುರದ ಸಬ್ ರಿಜಿಸ್ಟಾçರ್ ಕಛೇರಿಯಿಂದ ದಾನಪತ್ರದ ಪ್ರತಿಯನ್ನು ಶಾಲಾ ಮುಖ್ಯೋಪಾಧ್ಯಾಯರು ಪಡೆದಿದ್ದು ನ್ಯಾಯಾಲಯವು ಈ ಪ್ರಕರಣದಲ್ಲಿ ಸರಕಾರದ ವಿರುದ್ಧ ವ್ಯತಿರಿಕ್ತ ತೀರ್ಪು ನೀಡಿರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಅದಕ್ಕಾಗಿ ತಡೆಯಾಜ್ಞೆಗೂ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ನ್ಯಾಯಾಲಯದ ಆದೇಶದಂತೆ ಶಾಲೆ ಸ್ಥಳವು ಖಾಸಗಿಯವರ ಪಾಲಾದರೆ ಮಕ್ಕಳ ಹಕ್ಕು ವಿಷಯಕ್ಕೆ ಅಡ್ಡಿಯಾಗುತ್ತದೆ. ಈ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಸರಕಾರ, ಸಂಬAಧಿತ ಇಲಾಖೆ ಶಾಲಾ ಸ್ಥಳವನ್ನು ಶಾಲೆಗಾಗಿ ಉಳಿಸಿಕೊಡಬೇಕು ಎಂದು ಧರಣಿ ನಿರತರು ಸರಕಾರವನ್ನು ಒತ್ತಾಯಿಸಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ನಾವಡ ಈ ಶಾಲೆಯಲ್ಲಿ ೧೩೪ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶತಮಾನೋತ್ಸವವನ್ನು ಆಚರಿಸಿಕೊಂಡ ಸರಕಾರಿ ವಿದ್ಯಾಸಂಸ್ಥೆ. ಯಾವುದೇ ಕಾರಣಕ್ಕೂ ಇದು ಪರಬಾರೆ ಆಗಬಾರದು. ಕಾಪು ಸಂಜೀವ ಶೆಟ್ಟರು ಆಗ ೬೭ಸೆಂಟ್ಸ್ ಸ್ಥಳವನ್ನು ಖರೀದಿ ಮಾಡಿ ಶಾಲೆಗೆ ದಾನಪತ್ರದ ಮೂಲಕ ನೀಡಿದ್ದಾಗಿದ್ದು ದಾನಪತ್ರವೂ ಇದೆ. ಎಲ್ಲಾ ದಾಖಲೆಗಳು ಇದ್ದು ಇಲಾಖೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಲ್ಲಿ ವಿಫಲವಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಶಾಲೆಯನ್ನು ಉಳಿಸಿಕೊಳ್ಳುವಲ್ಲಿ ಶ್ರಮವಹಿಸಬೇಕಾಗಿದೆ ಎಂದರು.
ನಿವೃತ್ತ ಪ್ರಾಚಾರ್ಯ ಪ್ರೊ.ಶಂಕರ ರಾವ್ ಕಾಳಾವರ ಮಾತನಾಡಿ ಒಮ್ಮೆ ದಾನಪತ್ರದ ಮೂಲಕ ದಾನ ಕೊಟ್ಟಿದ್ದನ್ನು ಪುನಃ ಪಡೆಯುವುದು ಒಳ್ಳೆಯದಲ್ಲ. ಸರಕಾರ ಇದರ ಬಗ್ಗೆ ಗಮನ ಹರಿಸಬೇಕು. ಈ ಶಾಲೆಗೆ ತನ್ನದೆಯಾದ ಇತಿಹಾಸವಿದೆ. ಶಾಲೆಯ ಅಸ್ತಿತ್ವಕ್ಕೆ ದಕ್ಕೆಯಾಗಬಾರದು ಎಂದರು.
ಈ ಸಂದರ್ಭದಲ್ಲಿ ಧರಣಿ ಸ್ಥಳಕ್ಕೆ ಆಗಮಿಸಿದ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷಿö್ಮÃ ಅವರಿಗೆ ಮನವಿ ಸಲ್ಲಿಸಿ, ಶಾಲೆ ಆಸ್ತಿಯ ಪಹಣಿ ತಿದ್ದುಪಡಿಗೆ ಒತ್ತಡ ಬಂದರೂ ತಾವು ಮಣಿಯಬಾರದು ಎಂದು ಒತ್ತಾಯಿಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಗ್ರಾಮ ಪಂಚಾಯತ್ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಧರಣಿಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ದೀಪಾ ಶೆಟ್ಟಿ, ನಿವೃತ್ತ ಶಿಕ್ಷಕ ರಘುವೀರ್ ಕೆ., ಮೋಹನಚಂದ್ರ ಕಾಳಾವರ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತ್ ಶೆಟ್ಟಿ, ರಂಜಿತ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು, ಶಾಲಾಬಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











