ಕೋವಿಡ್ ವಾಕ್ಸಿನ್ ನಿರಾಕರಿಸಿದ ಮನೆಗಳಿಗೆ ತಹಶಿಲ್ದಾರ್ ಭೇಟಿ ಮನವೊಲಿಸಿ ಲಸಿಕೆ ವಿತರಣೆ

0
801

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಕೋವಿಡ್ ವಾಕ್ಸಿನ್ ನಿರಾಕರಿಸಿದ ಹಲವು ಮನೆಗಳಿಗೆ ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರಮೂರ್ತಿ ಭೇಟಿ ನೀಡಿ ಮನವೊಲಿಸಿ ವಾಕ್ಸಿನ್ ನೀಡುವ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಕೊರೋನಾ ಹೊಸತಳಿಗಳ ಪ್ರಸರಣ ಬೇರೆ ಬೇರೆ ದೇಶಗಳಲ್ಲಿ ಹುಟ್ಟಿಕೊಳ್ಳುತ್ತಿದೆ.ಈ ಹಿನ್ನಲ್ಲೆಯಲ್ಲಿ ಆಯಾ ವ್ಯಾಪ್ತಿಯ ಗ್ರಾಮಪಂಚಾಯತ್‍ಗಳಲ್ಲಿ ವಾಕ್ಸಿನ ನಿರಾಕರಿಸಿ ಮನೆಗಳಿಗೆ ತೆರಳಿ ಮನವೊಲಿಸಿ ವಾಕ್ಸಿನ್ ನೀಡುವ ಕಾರ್ಯಕ್ಕೆ ಕೈಜೋಡಿಸಿಕೊಳ್ಳಲಾಗಿದೆ.ಜನಸಾಮಾನ್ಯರಿಗೆ ವಾಕ್ಸಿನ್ ಭಯ ಹೊಗಲಾಡಿಸಿ ಅದರ ಬಗ್ಗೆ ವಿಶೇಷವಾಗಿ ಅರಿವು ಮೂಡಿಸಿ ಲಸಿಕೆ ವಿತರಿಸಲು ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಈ ಕಾರ್ಯಕ್ರಮಗಳನ್ನು ಎಲ್ಲಾ ಗ್ರಾಮಗಳಿಗೆ ಭೇಟಿನೀಡಿ ಸಮಸ್ಯೆ ಆಲಿಸಿ ಲಸಿಕೆ ನೀಡಲಾಗುತ್ತಿದೆ.ಬ್ರಹ್ಮಾವರ ತಾಲೂಕು ಲಸಿಕೆ 100ಶೇಕಡಾ ಪೂರ್ಣಗೊಳಿಸಲು ಕಾರ್ಯೊನ್ಮುಖವಾಗಿದ್ದೇವೆ ಎಂದು ಅಭಿಪ್ರಾಯಪಟ್ಟರು.

Click Here

ಈ ಸಂದರ್ಭದಲ್ಲಿ ಕೋಟ ಕಂದಾಯ ನಿರೀಕ್ಷಕ ರಾಜು,ಕೋಟ ಗ್ರಾಮಲೆಕ್ಕಿಗ ಚಲುವರಾಜು,ಸಹಾಯಕ ರಾಜು ಕುಂದರ್, ಆಶಾಕಾರ್ಯಕರ್ತೆಯರು,ಕೋಟ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here