ಉಪ್ಲಾಡಿ ಹೊಳೆಯಲ್ಲಿ ನಿಲ್ಲದ ಮರಳುಗಾರಿಕೆ ಗ್ರಾಮಸ್ಥರಿಂದ ತೀವ್ರ ವಿರೋಧ, ಅಧಿಕಾರಿಗಳ ಭೇಟಿ, ಗ್ರಾಮಸ್ಥರ ಪುನರೆಚ್ಚರಿಕೆ, ಮನವಿ

0
514

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ವಡ್ಡರ್ಸೆ ಗ್ರಾಮಪಂಚಾಯತ್ ಹಾಗೂ ಸಾಲಿಗ್ರಾಮಪಟ್ಟಣಪಂಚಾಯತ್ ವ್ಯಾಪ್ತಿಯನ್ನು ಹೊಂದಿಕೊಂಡಿರುವ ಚಿತ್ರಪಾಡಿ ಮತ್ತು ಉಪ್ಲಾಡಿ ಪರಿಸರದ ಹೊಳೆಯಲ್ಲಿ ಮರಳುಗಾರಿಕೆ ನಡೆಸುವವರ ವಿರುದ್ಧ ಗ್ರಾಮಸ್ಥರ ಹೋರಾಟ ಮುಂದುವರೆದಿದ್ದು ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯಾಡಳಿತ ಹಾಗೂ ಗಣಿ ಇಲಾಖೆಯ ಅಧಿಕಾರಿಗಳಿಗೆ ಛೀ ಮಾರಿ ಹಾಕಿದ ಘಟನೆ ಬುಧವಾರ ನಡೆದಿದೆ.

ಕಳೆದ ಸಾಕಷ್ಟು ದಿನಗಳಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ಗ್ರಾಮಸ್ಥರ ಹೋರಾಟ ತೀವ್ರ ಸ್ವರೂಪ ಪಡೆದಿದ್ದು ಸ್ಥಳಕ್ಕೆ ಗಣಿ ಇಲಾಖೆಯ ಸಂಧ್ಯಾ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಇದೇ ವೇಳೆ ಗ್ರಾಮಸ್ಥರ ಹಾಗೂ ಸ್ಥಳೀಯಾಡಳಿತ ,ಇಲಾಖಾಧಿಕಾರಿಗಳ ಮಧ್ಯ ವಾಕ್ ಸಮರ ನಡೆಯಿತು.

Click Here

ನಮ್ಮ ಭಾಗದಲ್ಲಿ ಮರಳುಗಾರಿಕೆ ನಡೆಸಲು ನಾವುಗಳು ಬಿಡುವ ಮಾತೆ ಇಲ್ಲ ಪ್ರಕೃತಿದತ್ತವಾದ ವ್ಯವಸ್ಥೆಯನ್ನು ಹಾಳುಗೆಡವಿ ಗ್ರಾಮಕ್ಕೆ ಸಮಸ್ಯೆ ತಂದಿಡುವ ಈ ರೀತಿಯ ಅಕ್ರಮ ಮರಳುಗಾರಿಕೆಗೆ ಅವಕಾಶ ನೀಡೆವು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ಈ ವೇಳೆ ಮಧ್ಯಪ್ರವೇಶಿದ ಅಧಿಕಾರಿಗಳು ಮಾಹಿತಿ ನೀಡಿ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಚಿತ್ರಪಾಡಿ ಪರಿಸರವನ್ನು ಹೊಂದಿರುವ ಈ ಭಾಗ ಸರ್ವೆ ಕಾರ್ಯನಡೆಸಿ ಮುಂದಿನ ಆದೇಶ ಬರುವವರೆಗೆ ಮರಳುಗಾರಿಕೆ ನಡೆಸದಂತೆ ಸೂಚಿಸಿತು.

ಪಟ್ಟಣಪಂಚಾಯತ್‌ಗೆ ಮನವಿ
ಮರಳುಗಾರಿಕೆ ನಡೆಯುವ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯನ್ನು ಹೊಂದಿರುವ ಚಿತ್ರಪಾಡಿ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡದಂತೆ ಉಪ್ಲಾಡಿ ಗ್ರಾಮಸ್ಥರು ಸಾಲಿಗ್ರಾಮ ಪಟ್ಟಣಪಂಚಾಯತ್‌ನ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್‌ಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ವಿನಾಯಕ ಭಟ್, ಅಶೋಕ್ ಶೆಟ್ಟಿ, ಶಿವರಂಜನಿ,ಶಿವಾನAದ ನಾಯರಿ,ಭೋಜ ಹೆಗ್ಡೆ,ವಸಂತ ಶೆಟ್ಟಿ,ಗೀತಾ ಆನಂದ್ , ಗ್ರಾಮಪಂಚಾಯತ್ ವಡ್ಡರ್ಸೆ ಅಧ್ಯಕ್ಷ ಲೋಕೇಶ್ ಕಾಂಚನ್,ಸದಸ್ಯರಾದ ಭಾಸ್ಕರ್ ಪೂಜಾರಿ,ಪಿಡಿಒ ಉಮೇಶ್,ಕೋಟ ಠಾಣೆಯ ಅಧಿಕಾರಿಗಳು ಇದ್ದರು.

Click Here

LEAVE A REPLY

Please enter your comment!
Please enter your name here