ಕುಂದಾಪುರ :ಕರಾವಳಿ ಸೊಗಡಿನ ದಿಂಸೋಲ್ ಚಲನಚಿತ್ರದ ಪೋಸ್ಟರ್ ಬಿಡುಗಡೆ

0
174

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕಿರಿಕ್ ಪಾರ್ಟಿ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಕುಂದಾಪುರ ಮೂಲದ ಬೀಜಾಡಿಯ ನಾಗೇಂದ್ರ ಗಾಣಿಗ ಇವರ ನಿರ್ದೇಶನದ ಕನ್ನಡ ಚಲನಚಿತ್ರ ಕುಂದಾಪುರ ಭಾಷೆಯ ಜತೆಗೆ ಕರಾವಳಿ ಸಂಸ್ಕೃತಿಯ ಸೊಗಡನ್ನು ಬಿಂಬಿಸುವ ದಿಂಸೋಲ್ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ತಲ್ಲೂರಿನ ರಾಜಾಡಿಯ ರಕ್ತೇಶ್ವರಿ ದೇವಸ್ಥಾನದಲ್ಲಿ ನಡೆಯಿತು.

ಅಭಿರಾಮಚಂದ್ರ ಸಿನಿಮಾ ಮೂಲಕ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ ಆ ಚಿತ್ರದಲ್ಲಿ ಬಾಲ್ಯ, ಸ್ನೇಹದ ಜೊತೆಗೆ ತ್ರಿಕೋನ ಪ್ರೇಮಕಥೆ ಹೇಳಿದ್ದ ಅವರಿಗ ಕರಾವಳಿ ಸಂಸ್ಕೃತಿಯ ಸೊಗಡನ್ನು ದಿಂಸೋಲ್ ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ.

Click Here

ದಿಂಸೋಲ್ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಅನ್ನು ವಕೀಲರಾದ ಟಿ.ಬಿ.ಶೆಟ್ಟಿ ಇವರು ಅನಾವರಣ ಮಾಡಿದ್ದಾರೆ. ನಟರಾದ ರಘು ಪಾಂಡೇಶ್ವರ್, ಯತೀಶ್ ಬೈಕಂಪಾಡಿ, ಸ್ಥಳೀಯ ಪ್ರಮುಖರು, ಗೋಪಾಡಿಯ ಮಹಿಳಾ ಭಜನಾ ಕುಣಿತ ತಂಡದವರು ಮತ್ತು ಕುಂದಾಪುರದ ಚಂಡೆ ತಂಡದ ಸದಸ್ಯರು ಉಪಸ್ಥಿತರಿದ್ದರು.

ನಾಗೇಂದ್ರ ಗಾಣಿಗ ಇವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾಕ್ಕೆ ಕೆಜಿಎಫ್ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ. ಕರಾವಳಿ ಭಾಗದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ನಡೆಯುವ ಆಚರಣೆಯೇ ಈ ಒಂದು ದಿಂಸೋಲ್. ದಿಂಸೋಲ್ ಜತೆಗೆ ಕರಾವಳಿ ಎಲ್ಲ ಸಂಸ್ಕೃತಿಯನ್ನು ಈ ಚಿತ್ರದ ಮೂಲಕ ನಾಗೇಂದ್ರ ಅವರು ದೃಶ್ಯರೂಪಕ್ಕೆ ಇಳಿಸುತ್ತಿದ್ದಾರೆ. ಫಸ್ಟ್ ಲುಕ್ ಸಂಪೂರ್ಣ ಕೆಂಪು ಬಣ್ಣದಿಂದ ಕೂಡಿದ್ದು ಆದಿದೇವಿಯು ರಕ್ತೇಶ್ವರಿ ಉಗ್ರ ಅವತಾರ ತಾಳಿದ್ದ ಈ ಪೋಸ್ಟರ್ ನಾನಾ ಕಥೆ ಹೇಳುತ್ತದೆ.

ಅಭಿರಾಮಚಂದ್ರ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ರಥಕಿರಣ್ ಹಾಗೂ ಶಿವಾನಿ ರೈ ದಿಂಸೋಲ್ ಚಿತ್ರದಲ್ಲಿಯೂ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಟಿ ಮಾನಸಿ ಸುಧೀರ್, ದೇವದಾಸ್ ಕಾಪಿಕಾಡ್, ರಘು ಪಾಂಡೇಶ್ವರ್, ದೀಪಕ್ ರೈ ಪಣಾಜಿ, ಮೈಮ್ ರಾಮ್ ದಾಸ್, ಗಣೇಶ್ ಕಾರಂತ್, ಸೂರಜ್ ಹಾಗೂ ಸುರಭಿ ಹಾಗೂ ಕರಾವಳಿ ಭಾಗದ ಸಾಕಷ್ಟು ರಂಗಭೂಮಿ ಕಲಾವಿದರು ತಾರಾ ಬಳಗದಲ್ಲಿದ್ದಾರೆ. ಮುಂಬರುವ ಡಿಸೆಂಬರ್ ತಿಂಗಳಲ್ಲಿ ಇಡೀ ಕರಾವಳಿ ಭಾಗದಲ್ಲಿಯೇ ಈ ಚಿತ್ರದ ಶೂಟಿಂಗ್ ಕಾರ್ಯ ನಡೆಯಲಿದೆ.
ಸಂದೀಪ್ ವಲ್ಲೂರಿ ಛಾಯಾಗ್ರಹಣ, ಪ್ರತೀಕ್ ಶೆಟ್ಟಿ ಸಂಕಲನ, ನಾಗೇಂದ್ರ ಗಾಣಿಗ ಸಾಹಿತ್ಯ, ಸಂಭಾಷಣೆ ಬರೆಯುತ್ತಿದ್ದು ಸಂಹಿತಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ದಿಂಸೋಲ್ ಚಿತ್ರ ಮೂಡಿಬರಲಿದೆ.

Click Here

LEAVE A REPLY

Please enter your comment!
Please enter your name here