ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಅಂಪಾರು ಶ್ರೀ ರಾಮ ಭಜನಾ ಮಂದಿರದ ವಾರ್ಷಿಕೋತ್ಸವ ನಡೆಯಿತು. ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಂಪಾರು ಗೌಡಸಾರಸ್ವತ ಸಮಾಜ ಬಾಂಧವರು “ಪಂಚದಿನ ಪರ್ವ” ಆಯೋಜನೆ ಮಾಡಿ ಆಚರಿಸಿ ಯಶಸ್ವಿಯಾದರು. ಮೊದಲನೆಯ ದಿನ ಬುಧವಾರ ಸಾಮೂಹಿಕ ತುಳಸಿ ಪೂಜೆ, ಎಲ್ಲಾ ಸಮಾಜ ಬಾಂಧವರು ಎಲ್ಲರ ಮನೆಗಳಿಗೆ ತೆರಳಿ ಪೂಜೆಯಲ್ಲಿ ಭಾಗಿಯಾದರು ನಂತರ ರಾಮ ಮಂದಿರದಲ್ಲಿ ಸೇರಿ ವಿಶೇಷ ತುಳಸಿ ಪೂಜೆ ಆಚರಿಸಿದರು. ಗುರುವಾರ ಮಂದಿರದಲ್ಲಿ ವಿಶೇಷ ಸಾಮೂಹಿಕ ಶ್ರೀ ರಾಮನಾಮ ತಾರಕ ಜಪ ಪಠಣೆ ನೆರವೇರಿತು. ಶುಕ್ರವಾರ ಸಂಜೆ ಅಂಪಾರು, ಕೊಲ್ಲಂಜೆ, ಕಂಚಾರು ಸೇರಿದಂತೆ ನಗರಭಜನೆ ಸಂಪನ್ನಗೊಂಡಿತು. ಶನಿವಾರ ” ಏಕಾಹ ಭಜನೆ” ಜಿಲ್ಲೆಯ ಪ್ರಸಿದ್ಧ ಜಿ ಎಸ್ ಬಿ ಭಜನಾ ಮಂಡಳಿಗಳಿಂದ ಅಖಂಡ ಭಜನಾ ಕಾರ್ಯಕ್ರಮ ವಿಜ್ರಂಭಣೆಯಿಂದ ನೆರವೇರಿತು.ಈ ನಡುವೆ ವಿಜ್ರಂಭಣೆಯ ದೀಪೋತ್ಸವ ಸಂಪನ್ನಗೊಂಡಿತು.
ನ. 17 ಆದಿತ್ಯವಾರ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಶೇಷ ಆಹ್ವಾನಿತ ಭಜನಾ ಮಂಡಳಿಗಳಿಂದ ಭಜನೆ, ಮಹಾಪೂಜೆ ನಡೆಯಿತು. ನಂತರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂದಿರದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ವಹಿಸಿದ್ದರು.
ಶೖಕ್ಷಣಿಕವಾಗಿ ವಿಶಿಷ್ಟ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿವೇತನದೊಂದಿಗೆ ಪುರಸ್ಕರಿಸಲಾಯಿತು. ಊರಿನ ಸಮಾಜದ ಈರ್ವರು ಅನಾರೋಗ್ಯ ಹೊಂದಿದವರಿಗೆ ಆರ್ಥಿಕ ಸಹಾಯ ನೀಡಲಾಯಿತು.
ಮುಖ್ಯ ಅತಿಥಿ ತೆಕ್ಕಟ್ಟೆ ಗಣೇಶ ಸಿಲ್ಕ್ ಮಾಲಿಕ ಅನಂತ ನಾಯಕ್ ಪ್ರತಿಭಾ ಪುರಸ್ಕಾರ ಕಾರ್ಯ ನೆರವೇರಿಸಿ, ಅತಿಥಿಗಳ ಸಾಲಿನಲ್ಲಿ ಮಾತನಾಡಿದ ಅಂಪಾರು ಚಿಕ್ಕ ಊರು, ಕಡಿಮೆ ಸಂಖ್ಯೆಯಲ್ಲಿರುವ ಜಿ ಎಸ್ ಬಿ ಸಮಾಜ ಬಂಧುಗಳ ಬಹುದೊಡ್ಡ ಸಾಧನೆ ಇದು ಇತರ ಹಳ್ಳಿಗಳಿಗೆ ಮಾದರಿ ಎಂದರು.
ದೇವರಿಗೆ ಅರ್ಪಿಸಿದ ಫಲಾವಳಿಗಳ ಏಲಂ ನಡೆಯಿತು. ಏಲಂನಲ್ಲಿ ಊರ ಪರ ಊರ ಭಕ್ತಾದಿಗಳು ಭಾಗವಹಿಸಿದ್ದರು. ಶ್ರೀ ದೇವರ ಮಹಾ ಪ್ರಸಾದ ಹರಿವಾಣವನ್ನು ಊರಿನ ಉದ್ಯಮಿ ಶ್ರೀ ಕೆ. ವೆಂಕಟ್ರಾಯ್ ಕಿಣಿಯವರು 10501 ರೂಪಾಯಿ ನೀಡಿ ಪಡೆದು ಕೃತಾರ್ಥರಾದರು. ಸಭೆಯಲ್ಲಿ ಅಂಪಾರು ಗ್ರಾಮಪಂಚಾಯಿತಿ ಮಾನ್ಯ ಅಧ್ಯಕ್ಷ ಗೋಪಾಲಕೃಷ್ಣ ಕಿಣಿಯವರು ಉಪಸ್ಥಿತರಿದ್ದು ಶುಭ ಹಾರೖಸಿದರು.
ಕಾರ್ಯದರ್ಶಿಗಳ ಪರವಾಗಿ ಧನಂಜಯ ಪ್ರಭು ಸ್ವಾಗತಿಸಿದರು, ಖಜಾಂಚಿ ರಘುವೀರ್ ಕಿಣಿ ವಂದಿಸಿದರು. ವೇದಮೂರ್ತಿ ಶ್ರೀ ಸುದರ್ಶನ ಆಚಾರ್ಯರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಭಾಗವಹಿಸಿದ ಎಲ್ಲಾ ಭಕ್ತಾದಿಗಳಿಗೆ ಮಹಾ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ಸಂಯೋಜನೆಯನ್ನು ಶಿಕ್ಷಕ ದಿನೇಶ ಪ್ರಭು ಮಾಡಿದರು.











