ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಇಲ್ಲಿನ ಪ್ರತಿಷ್ಟಿತ ವಿದ್ಯಾ ಸಂಸ್ಥೆ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿಬಿ ಇವರಿಗೆ ಬೆಳಗಾವಿ ಕಸ್ತೂರಿ ಸಿರಿಗನ್ನಡ ವೇದಿಕೆ(ರಿ) ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಿದೆ. 25 ವರ್ಷಗಳ ಸುಧೀರ್ಘ ಅಧ್ಯಾಪನ ವೃತ್ತಿ ಮತ್ತು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಮರಣ ನಂತರ ದೇಹದಾನ, ಅಂಗಾಂಗದಾನ, ನೇತ್ರಾದಾನದ ಬಗ್ಗೆ ಜಾಗ್ರತಿ ಮೂಡಿಸುತ್ತಿದ್ದು, ಸ್ವತಃ ಇವರ ಇಡೀ ಕುಟುಂಬವೇ ಕೆ ಎಂ ಸಿ ಮಣಿಪಾಲಕ್ಕೆ ದೇಹದಾನ ಮಾಡಿದೆ.
ಉಡುಪಿಯ ಶ್ರೀ ಕೃಷ್ಣ ಬ್ಲೆಡ್ ಡೊನ್ನರ್ಸ್ ತಂಡದ ಜೊತೆ ಸಕ್ರಿಯರಾಗಿದ್ದು, ರಕ್ತದ ಅಗತ್ಯವಿರುವ ರೋಗಿಗಳಿಗೆ ತಕ್ಷಣ ರಕ್ತ ಒದಗಿಸುವ ಸೇವೆಯನ್ನು ಮಾಡುತ್ತಿದ್ದಾರೆ.
ವಿವಿಧ ಸಂಘಟನೆ, ಚಟುವಟಿಕೆಯಲ್ಲಿ ಸದಾ ಸಕ್ರಿಯರಾಗಿರುವ ಅಧ್ಯಾಪಕ ಕೃಷ್ಣಮೂರ್ತಿಯವರಿಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಅಂತಾರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ” ಶ್ರೀ ಗುರುಕುಲ ತಿಲಕ ಪುರಸ್ಕಾರ” ನೀಡಲಾಗಿದೆ.
ಈ ವರ್ಷ ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ರಾಜ್ಯೋತ್ಸವ ಪುರಸ್ಕಾರಕ್ಕೆ ಆಯ್ಕೆ ಮಾಡಿ ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ಗೌರವಿಸಿದೆ.











