ಕೋಣಿ :ಲಯನ್ಸ್ ಕ್ಲಬ್ ಹಂಗಳೂರು ವತಿಯಿಂದ ರಕ್ತದಾನ ಶಿಬಿರ

0
180

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕೋಣಿ ಸ ಹಿ. ಪ್ರಾ ಶಾಲೆಯಲ್ಲಿ ಹಂಗಳೂರು ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳಾದ ಹಳೆ ವಿದ್ಯಾರ್ಥಿ ಸಂಘ, ಕೆಳಕೇರಿ ಸಂಘ, ನಿತ್ಯಾಧರ ಸಂಘ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರ ಕುಂದಾಪುರದ ರೆಡ್ ಕ್ರಾಸ್ ಸಂಸ್ಥೆಯ ಸಹಕಾರದೊಂದಿಗೆ ಜರಗಿತು.

ಲಯನ್ ರಾಜೀವ್ ಕೋಟ್ಯಾನ್ ಮಾತನಾಡಿ ಲಯನ್ಸ್ ಕ್ಲಬ್ ಹಂಗಳೂರಿನ ಕ್ಲಬ್ ನ ಸೇವಾ ಕಾರ್ಯದ ಬಗ್ಗೆ ಶ್ಲಾಘಿಸಿದರು. ಲಯನ್ಸ್ ಕ್ಲಬ್ ಹಂಗಳೂರು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಸಮಾಜಕ್ಕೆ ಅತೀ ಹೆಚ್ಚು ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.

Click Here

ಸಭೆಯ ಅಧ್ಯಕ್ಷತೆಯನ್ನು ಹಂಗಳೂರು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ರೋವನ್ ಡಿ’ಕೋಸ್ತ್ ವಹಿಸಿದ್ದರು.

ಈ ಸಂದರ್ಭದಲ್ಲಿ ಹೆಚ್ಚು ಬಾರಿ ರಕ್ತದಾನ ಮಾಡಿದ ಲಯನ್ ವಿಜಯ ಅವರನ್ನು ಗೌರವಿಸಲಾಯಿತು. ಅತ್ಯುತ್ತಮ ಸೇವೆಯನ್ನು ನೀಡುತ್ತಿರುವ ಲಯನ್ ರೋವನ್ ಡಿ’ಕೋಸ್ತ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. 65 ಯುನಿಟ್ ರಕ್ತವನ್ನು ಸಂಗ್ರಹಿಲಾಯಿತು.

Click Here

LEAVE A REPLY

Please enter your comment!
Please enter your name here