ಕೋಟ ಗ್ರಾಮಪಂಚಾಯತ್ ಚುನಾವಣೆ – ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರೇಮ ಗೆಲುವು

0
188

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೋಟ ಗ್ರಾಮಪಂಚಾಯತ್ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯ ದಾಖಲಿಸಿದ್ದಾರೆ.

ಇತ್ತೀಚಿಗೆ ಗಿಳಿಯಾರು ಹರ್ತಟ್ಟು ವಾರ್ಡ್ ಶಾಂತಿ ಜಿ.ಪೈ ನಿಧನ ಹೊಂದಿದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಬಿಜೆಪಿ ಬೆಂಬಲಿ ಅಭ್ಯರ್ಥಿಯಾಗಿ ಪ್ರೇಮ ಹರೀಷ್ ದೇವಾಡಿಗ, ಕಾಂಗ್ರೆಸ್ ಬೆಂಬಲಿತ ಸರಸ್ವತಿ ಶೇಖರ್ ದೇವಾಡಿಗ ಕಣದಲ್ಲಿದ್ದರು.

Click Here

ನ.23ರಂದು ಚುನಾವಣೆಯಲ್ಲಿ 221ಮತಗಳ ಅಂತರಿಂದ ಪ್ರೇಮ ಜಯಶಾಲಿಯಾದರು.

ಜಯಗಳಿಸಿದ ಪ್ರೇಮ ಹರೀಷ್ ರವರನ್ನು ಬಿಜೆಪಿ ಮುಖಂಡರು ಅಭಿನಂದಿಸಿದರು. ಇದೇ ವೇಳೆ ಕೋಟ ಅಮೃತೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here