ಚಿತ್ರಪಾಡಿ – ಹೆದ್ದಾರಿ ನಿರ್ವಹಣೆ ನಿರ್ಲಕ್ಷ್ಯ ,ವಿವಿಧ ಬೇಡಿಕೆ ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

0
234

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಕುಂದಾಪುರದಿಂದ ಹೆಜಮಾಡಿವರೆಗಿನ ರಾಷ್ಟ್ರೀಯ ಹೆದ್ದಾರಿ ಅಸರ್ಮಪಕ ನಿರ್ವಹಣೆ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಗುರುವಾರ ಚಿತ್ರಪಾಡಿ ಮಾಡಿಗುಡಿ ಬಳಿ ಬೃಹತ್ ಪ್ರತಿಭಟನೆ ಸಭೆ ನಡೆಸಿ ಪ್ರತಿಭಟಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ ಕಳೆದ ಸಾಕಷ್ಟು ವರ್ಷಗಳಿಂದ ಸ್ಥಳೀಯರಿಗೆ ಟೋಲ್ ವಿನಾಯಿತಿ ಸೇರಿದಂತೆ ಹೆದ್ದಾರಿ ಅಸರ್ಪಕ ಕಾಮಗಾರಿಯ ವಿರುದ್ಧ ಪ್ರತಿಭಟಿಸುತ್ತಾ ಬಂದಿದ್ದೇವೆ ಆದರೆ ಈ ಹಿಂದೆ ಇದ್ದ ನವಯುಗ ಕಂಪನಿ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಕೂಡಾ ಮಾಡಿದೆ, ಆದರೆ ಇತ್ತೀಚಿಗೆ ಹೆದ್ದಾರಿ ನಿರ್ವಹಣೆ ಗುತ್ತಿಗೆ ಪಡೆದ ಕೆ.ಕೆ ಆರ್ ಕಂಪನಿ ರಸ್ತೆ ನಿರ್ವಣೆಯಲ್ಲಿ ಎಡೆವಿದೆ ಅಲ್ಲದೆ ಉಡಾಫೆ ಉತ್ತರ ನೀಡುತ್ತಿದ್ದು ರಸ್ತೆ ಹೊಂಡಗುಂಡಿಗಳಿಗೆ ಮುಕ್ತಿಗಾಣಿಸದೆ ಸಾಕಷ್ಟು ಸಾವು ನೋವು ಸಂಭವಿಸುತ್ತಿದೆ. ಸರ್ವಿಸ್ ರಸ್ತಗಳಿಲ್ಲ, ಸಮರ್ಪಕ ದಾರಿದೀಪಗಳು, ಚರಂಡಿಗಳಿಲ್ಲ ಇಷ್ಟಲ್ಲದೆ ಸಾಕಷ್ಟು ಸಮಸ್ಯೆಗಳಿದ್ದರೂ ನಿರ್ಲಕ್ಷ್ಯೀಣಿಯ ಧೋರಣೆ ಅನುಸರಿಸುತ್ತಿದೆ. ಈ ಹಿನ್ನಲ್ಲೆಯಲ್ಲಿ ಇದೇ ಕೊನೆಯಂಬಂತೆ ಪ್ರತಿಭಟಿಸುತ್ತಿದ್ದೇವೆ ಮುಂದೆ ಇದೇ ನಿರ್ಲಕ್ಷ್ಯೀಯ ಧೋರಣೆ ಅನುಸರಿಸಿದರೆ ಟೋಲ್‍ಗೆ ಸಂಚಾಕಾರ ತಂದ್ದೋಡ್ಡಲಿದ್ದೇವೆ ಎಂದು ಆಕ್ರೋಶ ಹೊರಹಾಕಿದರು.

ರಸ್ತೆ ಅವ್ಯವಸ್ಥೆ ಗೊತ್ತಿದ್ದು ಜಿಲ್ಲಾಧಿಕಾರಿ ಕೈಕಟ್ಟಿ ಕಳಿತ್ತಿದ್ದಾರೆ,ಜಿಲ್ಲೆಯ ಜನಸಾಮಾನ್ಯರ ಸಮಸ್ಯೆಯ ಬಗ್ಗೆ ನ್ಯಾಯಕೊಡಿಸಬೇಕಾದ ಅಧಿಕಾರಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಹಾಗಾದರೆ ಈ ಸಮಸ್ಯೆಗಳಿಗೆ ಉತ್ತರಿಸುವವರು ಯಾರು ಎಂದು ಜಿಲ್ಲಾಧಿಕಾರಿಗಳನ್ನು ಕಟುವಾಗಿ ಟೀಕಿಸಿ ಮುಂದೆ ಕೂಡಾ ಇದೇ ರೀತಿ ಮುಂದುವರೆದರೆ ಟೋಲ್ ಈ ಭಾಗದಿಂದ ನೆಲಸಮ ಮಾಡಲಿದ್ದೇವೆ ಎಂದು ಹೋರಾಟ ಸಮಿತಿ ದಿನೇಶ್ ಗಾಣಿಗ ಉಡುಪಿ ಜಿಲ್ಲಾಧಿಕಾರಿ ಹಾಗೂ ಪೋಲಿಸ್ ಅಧಿಕಾರಿಗಳಿಗೆ ಎಚ್ಚರಿಸಿದರು.

Click Here

ಕೆ.ಕೆ ಆರ್ ಕಂಪನಿ,ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರ ಶವ ಅಣಕು ಪ್ರದರ್ಶನ
ಪ್ರತಿಭಟನಾ ಸಭೆಯಲ್ಲಿ ಏಕಾ ಏಕಿ ಒಂದು ಜೀವನ್‍ಮಿತ್ರ ಆ್ಯಂಬ್ಯುಲೇನ್ಸ್ ಪ್ರವೇಶ ಕಂಡುಬಂತು ನೆರೆದ್ದಿದ್ದ ಪ್ರತಿಭಟನಾಕಾರರು ದಿಗ್ಬ್ರಾಂತರಾಗಿ ಎದ್ದು ನಿಂತು ನೋಡುತ್ತಿದ್ದಂತೆ ಎರಡು ಶವಗಳನ್ನು ಹೊತ್ತೊಯುವ ದೃಶ್ಯ ಕಂಡುಬಂತು ಹೆದ್ದಾರಿ ನಿರ್ವಹಣೆಗೈಯುವ ಕೆ.ಕೆ ಆರ್ ಕಂಪನಿ ಹಾಗೂ ಪ್ರಾಧಿಕಾರದ ಅಧಿಕಾರಿಗಳ ಅಣಕು ಶವಗಳನ್ನು ಇರಿಸಿ ಅದಕ್ಕೆ ಶಾಸ್ತ್ರೋತ್ತರವಾಗಿ ಕ್ರಮಗಳನ್ನು ಮಾಡುವಂತ ದೃಶ್ಯ ಕಂಡುಬಂತು ಇದೇ ವೇಳೆ ಕಂಪನಿಯ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

ಒಂದು ತಿಂಗಳ ಗಡುವು
ರಸ್ತೆ ಹೊಂಡಗುಂಡಿಗಳಿಗೆ ಮುಕ್ತಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಒಂದು ತಿಂಗಳೊಳಗೆ ಸರಿಪಡಿಸಬೇಕು ಇಲ್ಲವಾದಲ್ಲಿ ಮುಂದಿನ ಹೋರಾಟ ಟೋಲ್ ಪ್ಲಾಜಾ ಬಳಿ ಅದು ವಿಶಿಷ್ಟ ರೀತಿ ಟೋಲ್ ನೀಡದೆ ಸಂಚರಿಸುವ ಪ್ರತಿಭಟನೆಯಾಗಲಿದೆ ಎಂದು ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಎಚ್ಚರಿಸಿದರು.

ಮರಣ ಡೋಲು ಬಾರಿಸಿ ಪ್ರತಿಭಟನೆ
ಪ್ರತಿಭಟನಾ ಸಭೆಯಲ್ಲಿ ವಿಶಿಷ್ಟತೆಯ ಭಾಗವಾಗಿ ಮರಣ ಡೋಲು ಬಾರಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ್ ನಾಯರಿ ತಮ್ಮ ಬೇಡಿಕೆಯ ಪತ್ರವನ್ನು ಬ್ರಹ್ಮಾವರದ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ಹಸ್ತಾಂತರಿಸಿದರು. ಈ ವೇಳೆ ತಹಶೀಲ್ದಾರ್ ಮಾಹಿತಿ ನೀಡಿ ಒಂದು ತಿಂಗಳೊಳಗೆ ಹೆಚ್ಚಿನ ಸಮಸ್ಯೆಗಳಿಗೆ ಮುಕ್ತಿಗಾಣಿಸಲು ಕಂಪನಿಯ ಅಧಿಕಾರಿಗಳಿಗೆ ಸೂಚಿಸಿದಲ್ಲದೆ ಪತ್ರದ ಮೂಲಕ ಲಿಖಿತವಾಗಿ ನೀಡುತ್ತೇನೆ ಎಂದರು. ಕೆ.ಕೆ ಆರ್ ಕಂಪನಿಯ ಉಸ್ತುವಾರಿ ತಿಮ್ಮಯ್ಯ, ಬ್ರಹ್ಮಾವರ ಸರ್ಕಲ್ ದಿವಾಕರ್, ಠಾಣಾಧಿಕಾರಿ ತೇಜಸ್ವಿ, ಕೋಟ ಠಾಣಾಧಿಕಾರಿ ರಾಘವೇಂದ್ರ ಮತ್ತಿತರರ ಅಧಿಕಾರಿಗಳು ಉಪಸ್ಥಿತರದ್ದರು.

ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ್ ನಾಯರಿ, ಪ್ರಮುಖರಾದ ಐರೋಡಿ ವಿಠ್ಠಲ ಪೂಜಾರಿ, ಪ್ರಶಾಂತ್ ಶೆಟ್ಟಿ, ಜಯಕರ್ನಾಟಕ ಸತೀಶ್ ಪೂಜಾರಿ,ರಾಜೇಶ್ ಕಾವೇರಿ,ಭೋಜ ಪೂಜಾರಿ, ಋಶಿರಾಜ್ ಸಾಸ್ತಾನ, ಚಂದ್ರಶೇಖರ್ ಮೆಂಡನ್, ನಾಗರಾಜ್ ಗಾಣಿಗ, ರಾಜೇಂದ್ರ ಸುವರ್ಣ, ಮಹಾಬಲ ಪೂಜಾರಿ, ರಾಜೇಶ್ ಸಾಸ್ತಾನ, ಅಚ್ಯುತ ಪೂಜಾರಿ, ಸುಲತಾ ಹೆಗ್ಡೆ, ಗಣೇಶ್ ಪೂಜಾರಿ, ಲೀಲಾವತಿ ಗಂಗಾಧರ್, ಫಾದರ್ ರೆವರೆಂಡ್ ಡಿಸಿಲ್ವ, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಮತ್ತಿತರರು ಇದ್ದರು. ಮಾಜಿ ಅಧ್ಯಕ್ಷರಾದ ಪ್ರತಾಪ್ ಶೆಟ್ಟಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯದರ್ಶಿ ಅಲ್ವಿನ್ ಅಂದ್ರಾದೆ ಸಭೆಯನ್ನು ನಿರ್ವಹಿಸಿದರು.

Click Here

LEAVE A REPLY

Please enter your comment!
Please enter your name here