ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಇಲ್ಲಿನ ಸರಕಾರಿ ಆಸ್ಪತ್ರೆಗೆ ಟಿವಿ18 ವಾಹಿನಿ ನೀಡುವ ರಾಜ್ಯದ ಅತ್ಯುತ್ತಮ ಸರಕಾರಿ ಆಸ್ಪತ್ರೆ ಪ್ರಶಸ್ತಿ ಲಭಿಸಿದ್ದು ಅಭಿನಂದನಾ ಕಾರ್ಯಕ್ರಮ ಡಿ.3ರಂದು ಮಂಗಳವಾರ ಆಸ್ಪತ್ರೆಯಲ್ಲಿ ನಡೆಯಿತು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರ ಮರಕಾಲ ಅವರಿಗೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ ರಾಯಪ್ಪನಮಠ ಪ್ರಶಸ್ತಿ ಹಸ್ತಾಂತರಿಸಿದರು.
ಪ್ರಶಸ್ವಿ ಸ್ವೀಕರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಚಂದ್ರ ಮರಕಾಲ ಅವರು ನಾವು ರೋಗಿಗಳಿಗೆ ನೀಡಿದ ಸೇವೆ ಗುರುತಿಸಿರುವುದು ಸಾರ್ಥಕವೆನಿಸುತ್ತಿದೆ. ರಾಜ್ಯಮಟ್ಟದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆ ಸಾರ್ವಜನಿಕವಾಗಿ ನೀಡಿದ ಸೇವೆಯನ್ನು ಗಮನಿಸಿರುವುದಕ್ಕೆ ಸಂತೋಷವಾಗುತ್ತಿದೆ. ರೋಗಿಗಳಿಗೆ ಇನ್ನೂ ಉತ್ತಮ ಸೇವೆ ನೀಡಲು ನಾವು ಸಿದ್ಧರಿದ್ದೇವೆ. ನಮ್ಮ ಜವಬ್ದಾರಿ ಹೆಚ್ಚಿದೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಆಸ್ಪತ್ರೆಯ ವೈದ್ಯರು, ರಾಜ್ಯ ಸರಕಾರಿ ನೌಕರರ ಸಂಘದ ಕುಂದಾಪುರ ತಾಲೂಕು ಶಾಖೆಯ ಅಧ್ಯಕ್ಷರಾದ ಡಾ.ನಾಗೇಶ್ ಮಾತನಾಡಿ, ಆಸ್ಪತ್ರೆಯ ಪ್ರತಿಯೊಬ್ಬ ವೈದ್ಯರು, ಸಿಬ್ಬಂದಿಯ ಸೇವೆಯಿಂದ ಈ ಪ್ರಶಸ್ತಿ ದೊರಕಿದೆ. ಸೇವೆಗೆ ಸೂಕ್ತ ಪ್ರತಿಫಲ ದೊರಕಿದಾದ ಇನ್ನೂ ಹೆಚ್ಚು ಕೆಲಸ ಮಾಡುವ ಹುಮ್ಮಸ್ಸು ಬರುತ್ತದೆ. ಈ ಗೌರವವನ್ನು ಉಳಿಸಿಕೊಳ್ಳುವ ಜವಬ್ದಾರಿಯೂ ಹೆಚ್ಚುತ್ತದೆ. ಈ ಆಸ್ಪತ್ರೆ ಇನ್ನೂ ಹೆಚ್ಚಿನ ಸೇವೆ ನೀಡಲು ನಾವು ಸದಾ ಸಿದ್ಧರಿದ್ದೇವೆ ಎಂದರು.

ಟಿವಿ18 ವರದಿಗಾರ ಗಣೇಶ್ ಪ್ರಶಸ್ತಿ ಆಯ್ಕೆಯ ಹಿನ್ನೆಲೆಯ ವಿವರ ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ವಿದ್ಯಾಲಕ್ಷ್ಮೀ, ಡಾ.ವೀಣಾ, ಡಾ.ವಿಷ್ಣು ನಾಯ್ಕ, ಡಾ.ಕರುಣಾಕರ, ಬಿ.ಸಿ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ವೀಣಾ ಪಿ.ಎಸ್ ಕಾರ್ಯಕ್ರಮ ನಿರ್ವಹಿಸಿದರು.











