ಕುಂದಾಪುರ :ಜನ್ನಾಡಿ 14 ಕೊರಗ ಕುಟುಂಬಗಳ ಗ್ರಹಪ್ರವೇಶ

0
751

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದ್ಯಮಿ ಹೆಚ್. ಎಸ್ ಶೆಟ್ಟಿಯವರು ಜನ್ನಾಡಿಯ ಕೊರಗ ಕುಟುಂಬಗಳಿಗೆ 14 ಮನೆ ನಿರ್ಮಿಸಿ ಇತ್ತೀಚೆಗೆ ಹಸ್ತಾಂತರಿಸಿದ ಮನೆಗಳ ಗ್ರಹ ಪ್ರವೇಶ ಸೋಮವಾರ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿಯವರ ಮುಂದಾಳತ್ವದಲ್ಲಿ ಶಾಸ್ತ್ರೋಕ್ತವಾಗಿ ನೆಡೆಯಿತು .

Click Here

ಪ್ರರೋಹಿತರಾದ ಉದಯ ಐತಾಳ ಸೌಡ, ಶ್ರೀಧರ ಉಡುಪ ಮೊಳಹಳ್ಳಿಯವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಪುರೋಹಿತರು ಗ್ರಹ ಪ್ರವೇಶದ ಪೂಜಾ ವಿಧಿ ವಿಧಾನ ನೆರವೇರಿಸಿದರು. ಗ್ರಹ ಪ್ರವೇಶವಾಗುತ್ತಿದಂತೆ ಬಾರಿ ಮಳೆಯ ಸಿಂಚನದಾಗಿದ್ದಕ್ಕೆ ಕುಟುಂಬದವರು ಮತ್ತು ಸ್ಥಳೀಯರು ಸಂತಸ ವ್ಯಕ್ತಪಡಿಸಿದರು . ನಂತರ ಸಹಬೋಜನ ಕಾರ್ಯಕ್ರಮ ನೆಡೆಯಿತು .

ಸ್ಥಳೀಯರಾದ ಲವಕರ ಶೆಟ್ಟಿ ಮಾಲಾಡಿ, ರಂಜಿತ್ ಸೌಡ, ದೀಕ್ಷಿತ ಮಡಿವಾಳ, ವೆಂಕಟೇಶ ಪ್ರಭು , ಗಣೇಶ್ ಮಡಿವಾಳ , ಶರತ ಕಾನ್ಮಕ್ಕಿ ಮಂಜುನಾಥ ಜನ್ನಾಡಿ ಶರತ ಮೊಗವೀರ, ಸುನಿಲ್ ಶೆಟ್ಟಿ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here