ಕುಂದಾಪುರ: ಹೂವಿನ ವ್ಯಾಪಾರಿಗಳ ಸಂಘದಿಂದ ವ್ಹೀಲ್ ಚೇರ್ ವಿತರಣೆ

0
276

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ಹೂವಿನ ವ್ಯಾಪಾರಿಗಳ ಸಂಘಟನೆ ಮನೋರಂಜನಾ ಕಾರ್ಯಕ್ರಮದ ಜೊತೆಗೆ ಅಶಕ್ತರಿಗೆ ವ್ಹೀಲ್ ಚೇರ್ ಹಾಗೂ ಕ್ಯಾನ್ಸರ್ ಪೀಡಿತರಿಗೆ ಸಹಾಯ ಹಸ್ತ ಚಾಚುವ ಮೂಲಕ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಕುಂದಾಪುರ ತಾಲೂಕು ನೌಕರರ ಸಂಘದ ನೂತನ ಅಧ್ಯಕ್ಷ, ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ನಾಗೇಶ್ ಹೇಳಿದರು.

Click Here

ಅವರು ಕುಂದಾಪುರದ ಹೂವಿನ ವ್ಯಾಪಾರಿಗಳ ಸಂಘದ ವತಿಯಿಂದ ನಡೆದ ಸಹಾಯ ಹಸ್ತ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರಿಗೆ ಬೇಕಾದ ಮನೋರಂಜನೆ ಒದಗಿಸುವ ಜೊತೆಗೆ ಸಮಾಜ ಮುಖಿ ಕಾರ್ಯಕ್ರಮ ಹೇಗೆ ಮಾಡಬೇಕು ಎನ್ನುವುದಕ್ಕೆ ಕುಂದಾಪುರದ ಹೂವಿನ ವ್ಯಾಪಾರಿಗಳ ಸಂಘ ಉತ್ತಮ ಉದಾಹರಣೆಯಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಸುಧೀರ್ ಪೂಜಾರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ್ ಆರ್ ಖಾರ್ವಿ ಮಾಜಿ ಅಧ್ಯಕ್ಷ ಶಿವ ಕುಮಾರ್ ಮೆಂಡನ್, ಸತೀಶ್ ಪೂಜಾರಿ, ಚಂದ್ರಕಾಂತ್ ಖಾರ್ವಿ, ಹಿರಿಯ ಸದಸ್ಯರಾದ ನವೀನ್ ಪೂಜಾರಿ, ಗಿರಿಜಾ ಶಂಕರ್,ಚಂದ್ರ ಮೆಂಡನ್, ಎಲ್ ಶೇಖರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 8 ಜನ ಅರ್ಹ ಫಲಾನುಭವಿಗಳಿಗೆ ವ್ಹಿಲ್ ಚೇರ್, 6 ಕಾನ್ಸರ್ ಪೀಡಿತರಿಗೆ ಸಹಾಯ ಧನ ಹಾಗೂ ಅಂಗವಿಕಲ ವಿದ್ಯಾರ್ಥಿಗೆ ವಿದ್ಯಾಬ್ಯಾಸಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಟೇಬಲ್ ವಿತರಣೆ ಮಾಡಲಾಯಿತು. ವಿವಿಧ ಕ್ರೀಡೆಯಲ್ಲಿ ವಿಜೇತ ರಾಗುವ ಮೂಲಕ ನಮ್ಮ ಕುಂದಾಪುರದ ಹಿರಿಮೆ ಹೆಚ್ಚಿಸಿದ ಕ್ರೀಡಾ ಪಟು ಗಳನ್ನು ಗೌರವಿಸಲಾಯಿತು. ಕುಮಾರ್ ಖಾರ್ವಿ ಸ್ವಾಗತಿಸಿ, ಶಿಕ್ಷಕ ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here